
ಅಪರೂಪದ ಕಾಡುಪ್ರಾಣಿಗಳನ್ನು ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಮೃಗಾಲಯಕ್ಕೆ ತೆಗೆದುಕೊಂಡು ಬರುತ್ತಿದ್ದ ವಾಹನ ಪಲ್ಟಿಯಾಗಿ ಅಪಘಾತಕ್ಕೀಡಾಗಿದ್ದು, ಇದರಲ್ಲಿದ್ದ ಪ್ರಾಣಿಗಳು ಸುರಕ್ಷಿತವಾಗಿವೆ ಎಂದು ವರದಿಯಾಗಿದೆ. ತೆಲಂಗಾಣದ ನಿರ್ಮಲ್ ಜಿಲ್ಲೆಯಲ್ಲಿ ಅಪರೂಪದ ಪ್ರಭೇದಗಳಾದ ಘರಿಯಲ್ ಮೊಸಳೆಗಳು ಮತ್ತು ಬಿಳಿ ಹುಲಿ ಸೇರಿದಂತೆ ಕಾಡು ಪ್ರಾಣಿಗಳನ್ನು ಸಾಗಿಸುತ್ತಿದ್ದ ವಾಹನವು ಅಪಘಾತಕ್ಕೀಡಾಗಿದೆ.
ವಾಹನವು ಚಾಲಕನ ನಿಯಂತ್ರಣ ಕಳೆದುಕೊಂಡು ಬುಧವಾರ ನಿರ್ಮಲ್ ಜಿಲ್ಲೆಯ ಮಮದಾ ಮಂಡಲದ ಮೊಂಡಿಗುಟ್ಟ ಗ್ರಾಮದ ಬಳಿ ಪಲ್ಟಿಯಾದ ಪರಿಣಾಮ ಈ ಅಪಘಾತ ಸಂಭವಿಸಿದೆ.
ಅದೃಷ್ಟವಶಾತ್, ಅಪರೂಪದ ಬಿಳಿ ಹುಲಿ ಸೇರಿದಂತೆ ಯಾವುದೇ ಪ್ರಾಣಿಗಳಿಗೆ ಹಾನಿಯಾಗಿಲ್ಲ. ವಾಹನದಲ್ಲಿದ್ದ ಎಂಟು ಮೊಸಳೆಗಳ ಪೈಕಿ ಎರಡನ್ನು ತಕ್ಷಣ ರಕ್ಷಿಸಲಾಯಿತು ಮತ್ತು ಸ್ಥಳೀಯ ಅರಣ್ಯ ಅಧಿಕಾರಿಗಳು ಯಾವುದೇ ಪ್ರಾಣಿಗಳು ತಪ್ಪಿಸಿಕೊಳ್ಳದಂತೆ ತ್ವರಿತ ಕ್ರಮಗಳನ್ನು ಕೈಗೊಂಡರು.
Poll (Public Option)

Post a comment
Log in to write reviews