ಭಾರೀ ಮಳೆಯಿಂದಾಗಿ ಉಜ್ಜಯಿನಿಯ ಮಹಾಕಾಳ ದೇವಾಲಯದ ಹೊರಬದಿಯ ಗೋಡೆ ಕುಸಿದಿದ್ದು, ಇಬ್ಬರು ಮೃತಪಟ್ಟಿದ್ದಾರೆ, ಹಲವರು ಸಿಲುಕಿರುವ ಆತಂಕವಿದೆ. ಅವಶೇಷಗಳ ಅಡಿಯಲ್ಲಿರುವ ವ್ಯಕ್ತಿಗಳ ಪತ್ತೆಗೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ನಿನ್ನೆ ಸಂಜೆ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಆರತಿ ಬೆಳಗುವ ವೇಳೆ ಶುರುವಾದ ಭಾರೀ ಮಳೆಯಿಂದ ಈ ದುರ್ಘಟನೆ ನಡೆದಿದೆ. ನಾಲ್ವರು ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಬ್ಬರು ಮಕ್ಕಳು, ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ ಸೇರಿದಂತೆ ಐದು ವ್ಯಕ್ತಿಗಳನ್ನು ಅವಶೇಷಗಳಿಂದ ಹೊರತೆಗೆಯುವಲ್ಲಿ ರಕ್ಷಣಾ ತಂಡ ಯಶಸ್ವಿಯಾಗಿದೆ. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇದೇ ಗೋಡೆ ಪಕ್ಕದಲ್ಲಿ ಹಲವರ ಅಂಗಡಿಗಳಿತ್ತು. ಸರಕುಗಳನ್ನ ಮಾರಾಟ ಮಾಡ್ತಿದ್ರು. ಹೀಗಾಗಿ ಗೋಡೆಯ ಅವಶೇಷಗಳಡಿಯಲ್ಲಿ ಇನ್ನೂ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಮಹಾಕಾಳ ದೇವಸ್ಥಾನದ ಆಡಳಿತ ಮಂಡಳಿಯವರು, ತಕ್ಷಣ ಮಹಾಕಲ್ ಪೊಲೀಸ್ ಠಾಣೆ ಮತ್ತು ದೇವಸ್ಥಾನದ ಸಿಬ್ಬಂದಿಗೆ ವಿಷಯ ಮುಟ್ಟಿಸಿ ರಕ್ಷಣಾ ಕಾರ್ಯಕ್ಕೆ ಮುಂದಗಿದ್ದಾರೆ.
ಮಧ್ಯಪ್ರದೇಶ ಮುಖ್ಯಮಂತ್ರಿ ಡಾ. ಮೋಹನ್ ಯಾದವ್, ತಮ್ಮ ಟ್ವೀಟ್‌ನಲ್ಲಿ ಉಜ್ಜಯಿನಿಯ ಘಟನೆ ಬಗ್ಗೆ ಬರೆದುಕೊಂಡಿದ್ದು, ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ 50,000 ರೂಪಾಯಿ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ್ದಾರೆ.
Post a comment
Log in to write reviews