ಟಾಪ್ 10 ನ್ಯೂಸ್
ವರುಣನ ಅಟ್ಟಹಾಸ: ಸಾರ್ವಜನಿಕರ ಹಿತಾದೃಷ್ಟಿಗಾಗಿ ಸಹಾಯವಾಣಿ ಸಂಖ್ಯೆ ಬಿಡುಗಡೆಮಾಡಿದ ಜಿಲ್ಲಾಡಳಿತ
ಬೆಳಗಾವಿ: ದೆಶದೆಲ್ಲೆಡೆ ವರುಣನ ಅಟ್ಟಹಾಸ ಮಿತಿ ಮೀರಿದ್ದು ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ನಿರಂತರ ಮಳೆ ಅಬ್ಬರಿಸುತ್ತಿರುವುದರಿಂದ ಇಲ್ಲಿನ ಪ್ರಮುಖ ನದಿಗಳಾದ ಕೃಷ್ಣ, ಘಟಪ್ರಭಾ, ಮಲಪ್ರಭಾ, ಮಾರ್ಕoಡೆಯ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದಾಗಿ ನದಿ ತೀರದ ಹಾಗೂ ತಗ್ಗು ಪ್ರದೇಶದಲ್ಲಿನ ಜನರಿಗೆ ಪ್ರವಾಹದ ಭೀತಿಯ ಪರಿಸ್ಥಿತಿ ಉಂಟಾಗಿದೆ.
ಈ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲಾಡಳಿತ ಸಾರ್ವಜನಿಕರ ಹಿತ ದೃಷ್ಟಿಯಿಂದ ಸಹಾಯವಾಣಿಯನ್ನ ಬಿಡುಗಡೆ ಮಾಡಿ, ಯಾವುದೇ ಸಮಸ್ಯೆಗಳು ಉಂಟಾದಲ್ಲಿ ಕೂಡಲೇ ಸಂಪರ್ಕಿಸಲು ತಿಳಿಸಿದೆ.
ಸಹಾಯವಾಣಿ:
1) ಪ್ರವಾಹ ಸಹಾಯವಾಣಿ (FLOOD HELPLINE) - 0831 2407290
2) ತುರ್ತು ಸಹಾಯವಾಣಿ (EMERGENCY HELPLINE) - 112
3) ಪೊಲೀಸ್ ಸಹಾಯವಾಣಿ (POLICE HELPLINE) - 0831 2474054
Post a comment
Log in to write reviews