ವಾಲ್ಮೀಕಿ ಹಗರಣದ ಬಂಧಿತ ಆರೋಪಿಗೆ ಮಾಜಿ ಸಚಿವ ನಾಗೇಂದ್ರ ಆಪ್ತರಿಂದ ಜೀವ ಬೆದರಿಕೆ

ಬೆಂಗಳೂರು : ವಾಲ್ಮೀಕಿ ಅಭಿವೃದ್ದಿ ನಿಗಮ ಹಗರಣದ A-13 ಆರೋಪಿಯಾಗಿರುವ ವಾಲ್ಮೀಕಿ ಹಗರಣದ ಬಂಧಿತ ಆರೋಪಿಗೆ ಮಾಜಿ ಸಚಿವ ನಾಗೇಂದ್ರ ಆಪ್ತರಿಂದ ಜೀವ ಬೆದರಿಕೆ ಬಂದಿದೆ.
ವಾಲ್ಮಿಕಿ ಅಭಿವೃದ್ದಿ ನಿಗಮ ಹಗರಣದ ಆರೋಪಿ ಸತ್ಯ ನಾರಾಯಣ ವರ್ಮಾನನ್ನು ಜೂ.4ರಂದು ಅರೆಸ್ಟ್ ಮಾಡಲಾಗಿತ್ತು. ಇದೀಗ ಬಂಧಿತ ಆರೋಪಿ ಸತ್ಯನಾರಾಯಣ ವರ್ಮಾ ಸ್ಪೋಟ ಮಾಹಿತಿಯೊಂದನ್ನ ಬಿಚ್ಚಿಟ್ಟಿದ್ದು ಮಾಜಿ ಸಚಿವ ನಾಗೇಂದ್ರ ಆಪ್ತರು ನನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಕೋರ್ಟ್ ನಲ್ಲಿ ನ್ಯಾಯಾಧೀಶರ ಮುಂದೆ ಗಂಭೀರ ಆರೋಪ ಮಾಡಿದ್ದಾರೆ.
ಇಂದು ಸತ್ಯನಾರಾಯಣ ವರ್ಮಾ ಸೇರಿ ಮೂವರು ಆರೋಪಿಗಳನ್ನ 3ನೇ ಎಸಿಎಂಎಂ ಕೋರ್ಟ್ ಗೆ ಹಾಜರು ಪಡಿಸಲಾಗಿತ್ತು. ಈ ವೇಳೆ ತನಗೆ ಜೀವ ಬೆದರಿಕೆ ಇರೋದಾಗಿ ಅಳಲು ತೋಡಿಕೊಂಡಿದ್ದಾರೆ. ಬಂಧನಕ್ಕೂ ಮುನ್ನ ಮನೆಗೆ ಬಂದು ಇಡೀ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ, ಕಸ್ಟಡಿಯಲ್ಲಿದ್ದ ವೇಳೆ ನಾಗೇಂದ್ರ ಪಿಎ ನೆಕ್ಕುಂಡಿ ನಾಗರಾಜ್ ಆಪ್ತರು ಹಲ್ಲೆ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ನ್ಯಾಯಾಧೀಶರು ಆರೋಪಿ ಹೇಳಿಕೆಯನ್ನ ದಾಖಲಿಸಿಕೊಂಡು, ಹಲ್ಲೆಗೆ ಯತ್ನಿಸಿರುವ ಆರೋಪ ಸಂಬಂಧ ತನಿಖೆ ನಡೆಸುವಂತೆ ಹಲಸೂರುಗೇಟ್ ಪೊಲೀಸರಿಗೆ ಕೋರ್ಟ್ ಸೂಚನೆ ನೀಡಿದೆ.
Poll (Public Option)

Post a comment
Log in to write reviews