
ಬೆಂಗಳೂರು : ವಾಲ್ಮೀಕಿ ಬಹುಕೋಟಿ ಹಗರಣ ಹೊರ ಬರುತ್ತಿದ್ದಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಪರಿಶಿಷ್ಠ ಪಂಗಡಗಳ ಕಲಾಣ್ಯ ಇಲಾಖೆಯ ಮಾಜಿ ಸಚಿವ ಬಿ.ನಾಗೇಂದ್ರಗೆ ಇದೀಗ ಬಂಧನದ ಸಂಕಷ್ಟ ಎದುರಾಗಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಪ್ರಕರಣ ಸಂಬಂಧ ಬಿ.ನಾಗೇಂದ್ರ ಅವರ ಆಪ್ತ, ನಾಗರಾಜ್ ಹಾಗೂ ಅವರ ಸಂಬಂಧಿ ನಾಗೇಶ್ವರ ರಾವ್ ಅವರನ್ನು ಈಗಾಗಲೇ ಎಸ್‌ಐಟಿ ಬಂಧಿಸಿತ್ತು. ಅವರಿಬ್ಬರೂ ವಿಚಾರಣೆ ವೇಳೆ ನೀಡಿದ್ದ ಮಾಹಿತಿ ಆಧರಿಸಿ ನಾಗೇಂದ್ರ ಅವರಿಗೆ ಎಸ್‌ಐಟಿ ನೋಟಿಸ್ ಜಾರಿ ಮಾಡಿದ್ದು, ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಇಂದು ಅವರು ವಿಚಾರಣೆಗೆ ಬಂದಾಗಲೇ ಅವರನ್ನು ಅರೆಸ್ಟ್ ಮಾಡೋ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.
Poll (Public Option)

Post a comment
Log in to write reviews