ಕರ್ನಾಟಕದ ವಿಧಾನಸಭೆಯಲ್ಲಿ ಖಾಲಿ ಹುದ್ದೆಗಳ ಭರ್ತಿ 4, 7ನೇ ತರಗತಿ, ಪದವೀಧರರು ಅರ್ಜಿ ಸಲ್ಲಿಕೆ ಮಾಡಬಹುದು
ಕರ್ನಾಟಕದ ವಿಧಾನಸಭೆಯಲ್ಲಿ ಖಾಲಿ ಇರುವಂತ ಕೆಲ ಹುದ್ದೆಗಳನ್ನ ಭರ್ತಿ ಮಾಡಲು ಸರ್ಕಾರ ಅರ್ಜಿಗಳನ್ನು ಆಹ್ವಾನ ಮಾಡಿದೆ. ವಿಧಾನ ಸಭೆ ಸಚಿವಾಲಯದ ನೇಮಕಾತಿ ಮತ್ತು ಸೇವಾ ಷರತ್ತು, ನಿಯಮಗಳು 2003ರ ನಿಯಮ 6 (8)ದಡಿ ಈ ಕೆಳಕಂಡ ವಿವಿಧ ವೃಂದದ ಹುದ್ದೆಗಳನ್ನು ನೇಮಕಾತಿ ಮಾಡಲಾಗುತ್ತಿದೆ. ಈ ಹುದ್ದೆಗಳಿಗೆ ಇಷ್ಟ ಇರುವವರು ಅರ್ಜಿ ಸಲ್ಲಿಕೆ ಮಾಡಬಹುದು.
ಈ ಉದ್ಯೋಗಗಳು ಎಷ್ಟು ಇವೆ. ಯಾವ್ಯಾವ ಹುದ್ದೆಗಳನ್ನು ನೇಮಕಾತಿ ಮಾಡಲಾಗುತ್ತಿದೆ. ಶುಲ್ಕ, ವಿದ್ಯಾರ್ಹತೆ ಸೇರಿದಂತೆ ಇನ್ನಿತರ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ. ಬೆರಚ್ಚುಗಾರರು ಸರ್ಕಾರದ ಇಲಾಖೆಯಿಂದ ಪ್ರಮಾಣ ಪತ್ರ ಹೊಂದಿರಬೇಕು.
ಕನ್ನಡ ಶೀಘ್ರಲಿಪಿ, ಹಾಗೂ ಪ್ರೌಢ ದರ್ಜೆಯ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣವಾಗಿರಬೇಕು. ಬಿಸಿಎ, 7ನೇ ತರಗತಿ, 4ನೇ ತರಗತಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ವರ್ಷದಿಂದ 40 ವರ್ಷಗಳು . ಅರ್ಜಿ ಶಲ್ಕ 500 ರೂಪಾಯಿಗಳು (ಇಂಡಿಯನ್ ಪೋಸ್ಟಲ್ ಆರ್ಡರ್). ಹುದ್ದೆಯ ಹೆಸರುಗಳು ವರದಿಗಾರರು 04, ಕಂಪ್ಯೂಟರ್ ಆಪರೇಟರ್- 03, ದಲಾಯತ್- 16, ಸ್ವೀಪರ್- 1, ಇಷ್ಟು ಉದ್ಯೊಗಗಳು ಇವೆ 27,000 ದಿಂದ 61,300 ರೂಪಾಯಿಗಳು ವೇತನ ಶ್ರೇಣಿ.
ಅರ್ಜಿ ಸಲ್ಲಿಕೆ ಮಾಡಬೇಕಾದ ವಿಳಾಸ : ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ ಕಾರ್ಯಲಯ, ಅಂಚೆ ಪಟ್ಟಿಗೆ ಸಂಖ್ಯೆ- 5074
ಮೊದಲ ಮಹಡಿ, ವಿಧಾನಸೌಧ, ಬೆಂಗಳೂರು- 560001
ಅರ್ಜಿಯನ್ನು ಸರ್ಕಾರಿ ಪುಸ್ತಕ ಅಂಗಡಿಗಳಿಂದ ತೆಗೆದುಕೊಂಡು ಅರ್ಜಿ ಸಲ್ಲಿಕೆ ಮಾಡಬಹುದು.
ಅರ್ಜಿ ಸಲ್ಲಿಕೆಯ ಕೊನೆ ದಿನಾಂಕ : ನವೆಂಬರ್ 2024
Post a comment
Log in to write reviews