
ಬೆಂಗಳೂರು: ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ ಹಿನ್ನೆಲೆಯಲ್ಲಿ ಜೂನ್ 16ರಂದು ಬೆಳಗ್ಗೆ 6ರಿಂದಲೇ ಮೆಟ್ರೋ ಸೇವೆಗಳು ಲಭ್ಯವಾಗಲಿವೆ. ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ಬಿಎಂಆರ್‌ಸಿಎಲ್ ಈ ಸೌಲಭ್ಯ ಕಲ್ಪಿಸುತ್ತಿದೆ. ಸಾಮಾನ್ಯವಾಗಿ ಭಾನುವಾರ ಮೆಟ್ರೋ ಸೇವೆಗಳು ಬೆಳಿಗ್ಗೆ 7ರಿಂದ ಆರಂಭಗೊಳ್ಳುತ್ತವೆ. ಆದರೆ ಅಂದು ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗಾಗಿ ಬೆಳಿಗ್ಗೆ 6ರಿಂದಲೇ ಸೇವೆ ಕಲ್ಪಿಸಲಾಗುತ್ತಿದೆ. ಅದರಂತೆ ಅಂದು 6 ಗಂಟೆಗೆ ವೈಟ್ ಫೀಲ್ಡ್, ಚಲ್ಲಘಟ್ಟ ನಾಗಸಂದ್ರ, ರೇಷ್ಮೆ ಸಂಸ್ಥೆ ನಿಲ್ದಾಣಗಳಿಂದ ಏಕಕಾಲದಲ್ಲಿ ರೈಲುಗಳು ನಿರ್ಗಮನ ಆಗಲಿವೆ ಎಂದು ನಿಗಮ ತಿಳಿಸಿದೆ.
Poll (Public Option)

Post a comment
Log in to write reviews