
ಬೆಂಗಳುರು: ಬೈಕ್ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ತಂದೆಯಿಂದ ಮಗನ ಕೊಲೆ ನಡೆದಿದೆ ಎನ್ನಲಾಗಿದ್ದು, ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಬಿಟ್ಟು ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಸಿಟ್ಟಿಗೆದ್ದು ಮಗನನ್ನೇ ತಂದೆ ಸಾಯಿಸಿದ ಘಟನೆ ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಂಜನ್ ಕುಮಾರ್ ಮೃತ ಪುತ್ರ. ವೆಂಕಟೇಶ್ ಕೊಲೆ ಮಾಡಿದ ಆರೋಪಿ ತಂದೆ.
ಭಾನುವಾರ ಸಂಜೆ ಬೈಕ್ ತೆಗೆದುಕೊಂಡು ಹೋಗಿದ್ದ ವೆಂಕಟೇಶ್, ಕುಡಿದ ಮತ್ತಲ್ಲಿ ಕೀ ಕಳೆದುಕೊಂಡು , ಬೈಕ್ ತರದೆ ಮನೆಗೆ ವಾಪಸ್ ಬಂದಿದ್ದ. ನಿನ್ನೆ ಬೆಳಗ್ಗೆ ತಂದೆಗೆ ಬೈಕ್ ಎಲ್ಲಿ ಎಂದು ಮಗ ಪ್ರಶ್ನಿಸಿದ್ದಾನೆ. ಈ ವೇಳೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳ ಜೋರಾಗಿದೆ. ಜಗಳ ಮಧ್ಯೆ ಹೆಲ್ಮೆಟ್ನಿಂದ ತಂದೆಗೆ ಅಂಜನ್ ಹಲ್ಲೆ ಮಾಡಿದ್ದಾನೆ. ಆಗ ಕೋಪಗೊಂಡು ತಂದು ಚಾಕುವಿನಿಂದ ಮಗನಿಗೆ ಇರಿದಿದ್ದಾನೆ. ಅಗ ಅಂಜನ್ ಎದೆಯ ಎಡಭಾಗಕ್ಕೆ ಚಾಕು ಹೊಕ್ಕಿದರ ಪರಿಣಾಮ ಅಂಜನ್ ತೀವ್ರ ರಕ್ತಸ್ರಾವಗೊಂಡು ಸಾವನ್ನಪ್ಪಿದ್ದಾನೆ.ಈ ಪ್ರಕರಣ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
Poll (Public Option)

Post a comment
Log in to write reviews