ಬೆಂಗಳೂರು: ಕುದುರೆಮುಖ ಕಬ್ಬಿಣ - ಅದಿರು ಕಂಪನಿಗೆ (KIOCL) ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿದರು. ಈ ವೇಳೆ ಹಲವು ವಿಷಯಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ವಿಶ್ವದಲ್ಲಿಯೇ ಅತ್ಯಂತ ಹಿರಿಯ ಕಬ್ಬಿಣ ಅದಿರು ಗಣಿಗಳಲ್ಲಿ ಒಂದಾಗಿದ್ದ ಈ ಕುದುರೆಮುಖ ಕಬ್ಬಿಣ ಕೈಗಾರಿಕೆಯು 2005 ಡಿಸೆಂಬರ್ 30ರ ಮಧ್ಯರಾತ್ರಿ ಗಣಿಗಾರಿಕೆಯನ್ನು ಸ್ಥಗಿತಗೊಳಿಸಲಾಗಿತ್ತು.
ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ಬರುವ ಈ ಕುದುರೆಮುಖ ಗಣಿಗಾರಿಕೆಯಲ್ಲಿ ತೆಗೆಯಲಾದ ಅದಿರನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಮೂಲಕ 110 ಕಿಲೋಮೀಟರ್ ಕೊಳವೆ ಮಾರ್ಗದ ಮೂಲಕ ಮಂಗಳೂರು ಪಕ್ಕದಲ್ಲಿರುವ ಪಣಂಬೂರು ಬಂದರಿಗೆ ಸಾಗಿಸಲಾಗುತ್ತಿತು.
ಕುದುರೆಮುಖ ಗಣಿಗಾರಿಕೆ ಹಿನ್ನೆಲೆ:
1913 ರಲ್ಲಿ 'ಮೈಸೂರಿನ ಭೂಶೋಧಕ, ಸಂಪತ್ ಅಯ್ಯಂಗಾರ್ ಅವರು 'ಕುದುರೆ ಮುಖ ಬೆಟ್ಟ'ದಲ್ಲಿ ಕಬ್ಬಿಣದ ಅಂಶವಿರುವುದನ್ನು ಪತ್ತೆಹಚ್ಚುತ್ತಾರೆ. ಅಂದೇ ಈ ಗಣಿಯಲ್ಲಿ ಸರಿಸುಮಾರು 4 ಮಿಲಿಯನ್ ಟನ್ ಗೂ ಅದಿಕ ಕಬ್ಭಿಣದ ಅದಿರು ಸಿಗಬಹುದೆಂದು ಅಂದಾಜಿಸಲಾಗಿತ್ತು. ನ್ಯಾಷನಲ್ ಮಿನರಲ್ ಡೆವೆಲಪ್ ಮೆಂಟ್ ಕಾರ್ಪೊರೇಷನ್, 1965 ರಲ್ಲಿ ಉತ್ಖನನ ನಡೆಸಿ, ಪ್ರತಿವರ್ಷ 25 ಮಿಲಿಯನ್ ಅದಿರು ತೆಗೆದರೂ ಈ ಗಣಿಯಲ್ಲಿ ಖಾಲಿಯೂ ಆಗುವುದಿಲ್ಲ ಹಾಗೂ ನಷ್ಟವೂ ಆಗುವುದಿಲ್ಲ ಎಂದು ವರದಿ ನೀಡುತ್ತದೆ. ಈ ಕುರಿತು 1975 ರಲ್ಲಿ ಭಾರತ-ಇರಾನ್ ಮಧ್ಯೆ ಅದಿರು ರಫ್ತು ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಾಗುತ್ತದೆ. ಮೈಸೂರು ಸರ್ಕಾರದ ಅಡಿಯಲ್ಲಿ ಭಾರಿ ಗಣಿ ಸಂಸ್ಥೆಯು ಕುದುರೆಮುಖ ಐರನ್ ಓರ್ ಲಿಮಿಟೆಡ್ 1976 ರ, ಏಪ್ರಿಲ್ 2 ರಂದು ಅಸ್ತಿತ್ವಕ್ಕೆ ಬರುತ್ತದೆ. ಒಟ್ಟಾರೆ ಕುದುರೆ ಮುಖ ಬೆಟ್ಟಗಳ ಶ್ರೇಣಿಯು 4ಸಾವಿರದ 605 ಹೆಕ್ಟೇರ್ ಭೂ ಪ್ರದೇಶವನ್ನ ಆವರಿಸಿದೆ. ಸರಿ ಸುಮಾರು ಒಂದು ಸಾವಿರಕ್ಕೂ ಅಧಿಕ ಕುಟುಂಬಗಳು ಈ ಗಣಿಗಾರಿಕೆ ಕೆಲಸದಲ್ಲಿ ತೊಡಗಿದ್ದರಂತೆ.
ಸದ್ಯ ಈ ಕುದುರೆಮುಖ ಗಣಿಗಾರಿಯ ಕಡೆ ನೂತನ ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮುಖ ಮಾಡಿರುವುದು ಮತ್ತೊಮ್ಮೆ ಈ ಗಣಿಗಾರಿಕೆ ಚಾಲ್ತಿಗೆ ಬರುತ್ತಾ ಎಂಬ ನಿರೀಕ್ಷೆ ರಾಜ್ಯದ ಜನರಲ್ಲಿ ಹೆಚ್ಚಾಗುತ್ತಿದೆ.
Post a comment
Log in to write reviews