2024-12-24 07:41:32

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ರಾಮನಗರಕ್ಕೆ ಕಾವೇರಿ ಪಾದಾರ್ಪಣೆ ಕೇಂದ್ರ ಸಚಿವ ಹೆಚ್‌.ಡಿ.ಕೆ ಕನಸು ನನಸು

ಬೆಂಗಳೂರು : ರಾಮನಗರ ಜಿಲ್ಲೆಗೆ ಕಾವೇರಿ ನದಿಯಿಂದ ಕುಡಿಯುವ ನೀರು ಪೂರೈಸುವ ಕನಸು ನನಸಾಗಿದೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕಾ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಹೆಚ್‌.ಡಿ.ಕೆ ರಾಮನಗರ ಜಿಲ್ಲೆಗೆ ಕಾವೇರಿ ತಾಯಿ ಪಾದಾರ್ಪಣೆ ಮಾಡಿದ್ದಾಳೆ. ಈ ನೆಲದ ಜನರ ಕನಸು ನನಸಾಗಿದೆ ಎಂದು ಬರೆದುಕೊಂಡಿದ್ದಾರೆ.
ಕಳೆದ 2018ರಲ್ಲಿ ನಾನು ಮುಖ್ಯ ಮಂತ್ರಿಯಾಗಿದ್ದಾಗ 458 ಕೋಟಿ ರೂ. ವೆಚ್ಚದಲ್ಲಿ ಟಿ.ಕೆ.ಹಳ್ಳಿಯಿಂದ ರಾಮನಗರ ಜಿಲ್ಲೆಗೆ ಕಾವೇರಿ ನೀರು ಪೂರೈಸುವ ಮಹತ್ವಾಕಾಂಕ್ಷಿ ಯೋಜನೆಗೆ ಅನುಮೋದನೆ ನೀಡಿದ್ದೆ, ಈ ಯೋಜನೆ ಈಗ ಸಾಕಾರಗೊಂಡಿದ್ದು, ಪ್ರಾಯೋಗಿಕವಾಗಿ ಬೋಳಪ್ಪನಹಳ್ಳಿ ಗುಡ್ಡಕ್ಕೆ ಕಾವೇರಿ ನೀರು ಹರಿದು ಬಂದಿದೆ ಎಂದಿದ್ದಾರೆ.ಇದು ನನಗಷ್ಟೇ ಅಲ್ಲ ಇಡೀ ಜಿಲ್ಲೆಯ ಜನರ ಸಂಭ್ರಮಕ್ಕೆ ಕಾರಣವಾಗಿದೆ. ನನಗೆ  ಜನ ಕೊಟ್ಟ ಆರ್ಶಿವಾದ ಈ ನೆಲದ ಋಣ ತೀರಿಸಲು ಮತ್ತಷ್ಟು ಶ್ರಮಿಸುತ್ತೇನೆ ಎಲ್ಲರಿಗೂ ಶುಭವಾಗಲಿ ಎಂದು ತಿಳಿಸಿದ್ದಾರೆ.

Post a comment

No Reviews