
ಮೈಸೂರು : ವಾಹನ ಡಿಕ್ಕಿ ಹೊಡೆದು ಅಪರಿಚಿತ ಮಹಿಳೆ ಸಾವನ್ನಪಿರುವ ಘಟನೆ ಮೈಸೂರು ಜಿಲ್ಲೆ, ಹುಣಸೂರು ತಾಲೂಕಿನ ಬನ್ನಿಕುಪ್ಪೆ ಬಳಿ ನಡೆದಿದೆ.
ಮೈಸೂರು ಬಂಟ್ವಳ ರಾಷ್ಟೀಯ ಹೆದ್ದಾರಿ 275 ರ ಮಹಿಳೆ ಬನ್ನಿಕುಪ್ಪೆ ಯಿಂದ ಮೈಸೂರು ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಈ ಘಟನೆ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಬಿಳಿಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಹುಣಸೂರು ಶವಾಗಾರಕ್ಕೆ ಮೃತ ದೇಹ ರವಾನೆ ಮಾಡಿದ್ದಾರೆ. ಮೃತ ಮಹಿಳೆ ಬಗ್ಗೆ ಯಾವುದೇ ಮಾಹಿತಿ ಪೊಲೀಸರಿಗೆ ಲಭ್ಯವಾಗಿಲ್ಲ. ಹಾಗಾಗಿ ಮಹಿಳೆಯ ಬಗ್ಗೆ ಮಾಹಿತಿ ಸಿಕ್ಕವರು ಕೋಡಲೆ ತಿಳಿಸುವಂತೆ ಬಿಳಿಕೆರೆ ಪೊಲೀಸ್ ಇನ್ಸ್ಪೆಕ್ಟರ್ ಲೋಲಾಕ್ಷಿ ಮನವಿ ಮಾಡಿಕೊಂಡಿದ್ದಾರೆ.
Poll (Public Option)

Post a comment
Log in to write reviews