ರಷ್ಯಾ ಕೆಂಗಣ್ಣಿಗೆ ಗುರಿಯಾಗಿ ನರಳಿರುವ ಉಕ್ರೇನ್ ಈಗ ಜೀವ ಉಳಿಸಿಕೊಳ್ಳಲು ಒದ್ದಾಡುವ ಪರಿಸ್ಥಿತಿಗೆ ಬಂದಿದೆ. ಉಕ್ರೇನ್‌ನ ಪ್ರಮುಖ ನಗರ ಖಾರ್ಕಿವ್ ನಗರದ ಮೇಲೆ ರಷ್ಯಾ ಕಳೆದ 2 ವಾರಗಳಿಂದ ನಿರಂತರವಾಗಿ ದಾಳಿ ಮಾಡುತ್ತಿದ್ದು, ರಷ್ಯಾ ದಾಳಿಗೆ ಜೀವ ತೆತ್ತವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.
ಯುದ್ಧ ಬೇಡ ಬೇಡ ಅಂತಾ ಎಷ್ಟೇ ತಡೆ ಹಾಕಲು ಪ್ರಯತ್ನಿಸಿದರೂ, ಯುದ್ಧಗಳು ಮಾತ್ರ ನಡೆಯುತ್ತಲೇ ಇದೆ. ಯುದ್ಧದಿಂದಾದ ರಕ್ತಪಾತಕ್ಕೆ ಕೋಟ್ಯಾಂತರ ಅಮಾಯಕರ ಜೀವ ಬಲಿಯಾಗುತ್ತಿದ್ದರೂ, ಅಧಿಕಾರದಲ್ಲಿ ಇರುವ ಅಹಂಕಾರಿ ನಾಯಕರು ಮಾತ್ರ ಯುದ್ಧ ನಿಲ್ಲಿಸವ ಮಾತೇ ಆಡುತ್ತಿಲ್ಲ.
ಉಕ್ರೇನ್ ಮತ್ತು ರಷ್ಯಾ ಯುದ್ಧದಲ್ಲಿ ಯುರೋಪ್ ಖಂಡ ನಲುಗಿ ಹೋಗಿದೆ, ರಷ್ಯಾ ಮಾತ್ರ ಯುದ್ಧ ನಿಲ್ಲಿಸಲು ತಯಾರಿಲ್ಲ, ಹೀಗಾಗಿ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಮತ್ತೊಂದು ಕಡೆ ಉಕ್ರೇನ್‌ನ ಖಾರ್ಕಿವ್ ಮೇಲೆ ರಷ್ಯಾ ನಡೆಸಿದ ಬಾಂಬ್ ದಾಳಿಯಲ್ಲಿ ಸತ್ತವರ ಸಂಖ್ಯೆ 14 ಕ್ಕೆ ಏರಿಕೆಯಾಗಿದೆ.
ಸುಮಾರು 2 ಲಕ್ಷ 50 ಸಾವಿರ ಜನ ವಾಸ ಇರುವ ಖಾರ್ಕಿವ್ ಮತ್ತು ಸುಮಿ ನಗರಗಳು ರಷ್ಯಾ ಗಡಿಯಿಂದ ಕೇವಲ 25 ಕಿಲೋ ಮೀಟರ್ ದೂರದಲ್ಲಿವೆ. ಹೀಗಾಗಿ, ರಷ್ಯಾ ಸೇನೆ ಈ ಪ್ರದೇಶಗಳ ಮೇಲೆ ತೀವ್ರವಾಗಿ ದಾಳಿ ಮಾಡುತ್ತಿದ್ದು, ನೋಡ ನೋಡುತ್ತಲೇ ಉಕ್ರೇನ್ ದೇಶದ ಅತಿದೊಡ್ಡ ಪ್ರಾಂತ್ಯ ರಷ್ಯಾ ಸೇನೆ ಕೈಗೆ ಸಿಗುತ್ತಿದೆ. ಹೀಗಾಗಿ ಭಯ ಮತ್ತು ಆತಂಕದಲ್ಲೇ ಉಕ್ರೇನ್ ಜನಗಳು ದಿನ ದೂಡುವ ಪರಿಸ್ತಿತಿ ಇದೆ.
2022ರಲ್ಲಿ ರಷ್ಯಾ- ಉಕ್ರೇನ್ ನಡುವೆ ಯುದ್ಧ ಶುರುವಾದ ನಂತರ ಜಾಗತಿಕ ಮಟ್ಟದಲ್ಲಿ ಸೇನಾ ಸಶಸ್ತ್ರಗಳ ಬೇಡಿಕೆ ಹೆಚ್ಚಾಗಿದೆ. ಹಾಗೇ, ರಕ್ಷಣಾ ಬಜೆಟ್ ಕೂಡಾ ಹೆಚ್ಚಾಗುತ್ತಿದೆ. ಶ್ರೀಮಂತ ದೇಶಗಳು ತಮ್ಮ ಸೇನಾ ಖರ್ಚಿಗೆ ಹೆಚ್ಚಾಗಿ ಹಣ ಬಳಸುತ್ತಿವೆ. ಈ ಮೂಲಕ ಕಳೆದ ವರ್ಷ ರಕ್ಷಣಾ ಬಜೆಟ್ ಸುಮಾರು 2.44 ಟ್ರಿಲಿಯನ್ ಡಾಲರ್‌ಗೆ ತಲುಪಿದ್ದು, ಮತ್ತೊಂದಡೆ ರಕ್ಷಣಾ ಬಜೆಟ್ ಹೆಚ್ಚಾದಂತೆ ಯುದ್ಧ ಭೀತಿ ಹೆಚ್ಚಾಗಿದೆ. ಹೀಗಿದ್ದರೂ ಯುದ್ಧ ನಿಲ್ಲಿಸಲು ರಷ್ಯಾ ಮಾತ್ರ ತಯಾರಿಲ್ಲ , ಮತ್ತೊಂದೆಡೆ ಉಕ್ರೇನ್ ಕೂಡ ತನ್ನ ಅಹಂಕಾರ ಬಿಟ್ಟು ಮಾತುಕತೆಗೆ ಮುಂದೆ ಬರುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಒಟ್ಟಿನಲ್ಲಿ ಉಕ್ರೇನ್ - ರಷ್ಯಾ ನಡುವಿನ ಯುದ್ಧ ನಿಲ್ಲುವ ತನಕ ಜಾಗತಿಕ ಮಟ್ಟದಲ್ಲಿ ಶಾಂತಿ ಮೂಡುವುದು ಕಷ್ಟಕರ ಎನ್ನಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಯುದ್ಧ ಇನ್ನಷ್ಟು ದೊಡ್ಡ ತಿರುವು ಪಡೆಯುವ ಲಕ್ಷಣ ಕೂಡ ಕಾಣುತ್ತಿದೆ ಎಂದು ಜಾಗತಿಕ ಮಟ್ಟದಲ್ಲಿ ಚಚೆ೯ ನಡೆಯುತ್ತಿದೆ.
Post a comment
Log in to write reviews