
ಮುಂಬೈ: ಹದಿನಾಲ್ಕು ವರ್ಷಗಳ ಹಿಂದೆ ನಡೆದಿದ್ದ ಹೋಟೆಲ್ ಉದ್ಯಮಿ ಜಯ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಭೂಗತ ಪಾತಕಿ ಛೋಟಾ ರಾಜನ್‌ನನ್ನು ಅಪರಾಧಿ ಎಂದು ನ್ಯಾಯಾಲಯ ಘೋಷಿಸಿದ್ದು, ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಮಹಾರಾಷ್ಟ್ರದ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಎಂಸಿಒಸಿಎ) ಅಡಿ ವಿಚಾರಣೆ ನಡೆಸುವ ಮುಂಬೈ ವಿಶೇಷ ಕೋರ್ಟ್ ನ್ಯಾಯಾಧೀಶ ಎ.ಎಂ. ಪಾಟೀಲ್ ಮೇ 30 ರಂದು ಆದೇಶ ನೀಡಿದ್ದಾರೆ.
ಮುಂಬೈನ ಗಾಮ್‌ದೇವಿಯ ಗೋಲ್ಡನ್ ಕೌನ್ ಹೋಟೆಲ್ ಮಾಲೀಕರಾಗಿದ್ದ ಜಯ ಶೆಟ್ಟಿಗೆ ಛೋಟಾ ರಾಜನ್ ಗ್ಯಾಂಗ್‌ನಿಂದ ಹಣಕ್ಕಾಗಿ ಬೇಡಿಕೆ ಇಟ್ಟು ಆಗಾಗ ಕರೆ ಮಾಡುತ್ತಿದ್ದರು. ಆದೇ ಗ್ಯಾಂಗ್‌ನ ಇಬ್ಬರು ದುಷ್ಕರ್ಮಿಗಳು ಜಯ ಶೆಟ್ಟಿ ಅವರನ್ನು 2001 ಮೇ 4ರಂದು ಕೊಲೆ ಮಾಡಿದ್ದರು ಎಂದು ಹೋಟೆಲ್ ಮ್ಯಾನೇಜರ್ ನೀಡಿದ ದೂರಿನ ಮೇರೆಗೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು. ಈಗಾಗಲೇ 2021ರಲ್ಲಿ ಪತ್ರಕರ್ತ ಜೆ ಡೇ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ರಾಜನ್, ಪ್ರಸ್ತುತ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾನೆ.
Poll (Public Option)

Post a comment
Log in to write reviews