
ಚಿಂತಾಮಣಿ: ಗಂಡನ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ತಾಳಲಾರದೇ ಯುವತಿ ನೇಣುಗೆ ಶರಣಾದ ಘಟನೆ ಚಿಂತಾಮಣಿ ಗಾಂಧಿನಗರದಲ್ಲಿ ನಡೆದಿದೆ. ಮೃತ ಯುವತಿಯು ಬಿಂದುಶ್ರೀ (22) ಎಂದು ತಿಳಿದು ಬಂದಿದೆ.
ಇನ್ನೂ ಚಿಂತಾಮಣಿ ಕಾಲೇಜಿನಲ್ಲಿ ಪದವಿ ವ್ಯಾಸಾಂಗ ಮಾಡುತ್ತಿದ್ದ ಬಿಂದುಶ್ರೀಯನ್ನು ಕಳೆದ 7 ತಿಂಗಳ ಹಿಂದೆಯಷ್ಟೇ ಆವಲಹಳ್ಳಿ ಬಳಿಯ ಹಿರಂಡಹಳ್ಳಿಯ ರಾಘವೇಂದ್ರ ಎಂಬುವವರಿಗೆ 2024 ರ ಫೆಬ್ರವರಿ 21 ರಂದು ಕೈವಾರ ಸಮೀಪ ಮದುವೆ ಮಾಡಿಕೊಡಲಾಗಿತ್ತು. ಕೇವಲ ಎರಡೇ ತಿಂಗಳಿಗೆ ಕಾರು ಹಾಗೂ 20 ಲಕ್ಷ ಹಣ ತರುವಂತೆ ಬಿಂದುಶ್ರೀಗೆ ಪೀಡಿಸುತ್ತಿದ್ದು, ಇದೇ ವಿಚಾರವನ್ನು ಬಿಂದುಶ್ರೀ ಪೋಷಕರಿಗೆ ಮಾಹಿತಿ ತಿಳಿಸಿದ್ದಾಳೆ. ಆದರೆ ಬಿಂದುಶ್ರೀ ಪೋಷಕರು ಅಷ್ಟೊಂದು ಹಣ ನಮ್ಮ ಬಳಿ ಇಲ್ಲಾ ಸಾಧ್ಯವಾದಷ್ಟು ಕೊಡುವುದಾಗಿ ತಿಳಿಸಿದ್ದಾರೆ.
ನಂತರ ಬಿಂದುಶ್ರೀ ಪೋಷಕರು ಅವರನ್ನುಗಂಡನ ಮನೆಗೆ ಬಿಡಲೆಂದು ಹೋದ ವೇಳೆ ಮನೆಗೆ ಪ್ರವೇಶವಿಲ್ಲ ಎಂದು ಅವಮಾನಿಸಿ ವಾಪಸ್ ಕಳುಹಿಸಿದ್ದಾರೆ. ತದ ನಂತರ ಮಗಳನ್ನು ಮನೆಗೆ ವಾಪಸ್ ಕರೆತಂದು ಅವಲಹಳ್ಳಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇನ್ನೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದಂತೆ ರಾಘವೇಂದ್ರ ಅವರ ತಂದೆ ಮುನಿರಾಜು ನಮಗೆ ಗೃಹ ಸಚಿವ ಮಿಲಿಟರಿ ಸಪೋರ್ಟ್ ಇದೆ ಎಂದು ಬೆದರಿಸಿದ್ದಾರೆ. ನಂತರ ಬಿಂದುಶ್ರೀ ಕುಟುಂಬ ತಮ್ಮ ಜೀವನ ನಮ್ಮದು ಎಂಬಂತೆ ಇರುವಾಗ ಬಿಂದುಶ್ರೀ ಸೆಪ್ಟೆಂಬರ್ 14ರ ಸಂಜೆ 5 ಗಂಟೆಯಲ್ಲಿ ತಾಯಿ ದೇವಸ್ಥಾನಕ್ಕೆಂದು ಹೋದ ವೇಳೆ ತಂದೆಯನ್ನು ತಿಂಡಿ ತರುವಂತೆ ಅಂಗಡಿಗೆ ಕಳುಹಿಸಿ. ಬಿಂದು ಶ್ರೀ ಮನೆಯ ಪ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಸಿದ್ದು ಗಾಬರಿ ಯಿಂದ ಮನೆಯ ಪಕ್ಕದ ಸಹಾಯದಿಂದ ಕೆಳಕ್ಕೆ ಇಳಿಸಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದು ನಂತರ ಮೃತಪಟ್ಟಿರುವುದಾಗಿ ವೈದ್ಯರು ಸ್ಪಷ್ಟಪಡಿಸಿದ್ದಾರೆ.
Poll (Public Option)

Post a comment
Log in to write reviews