
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ವೈಷ್ಣೋದೇವಿ ದೇಗುಲಕ್ಕೆ ಹೋಗುವ ಮಾರ್ಗದಲ್ಲಿ ಇಂದು (ಸೋಮವಾರ) ಸಂಭವಿಸಿದ ಭೂಕುಸಿತದಿಂದ ಇಬ್ಬರು ಮಹಿಳಾ ಯಾತ್ರಾರ್ಥಿಗಳು ಸಾವನ್ನಪ್ಪಿ, ಓರ್ವ ಬಾಲಕಿಗೆ ತೀವ್ರ ಗಾಯಗಳಾಗಿವೆ. ಈ ಸ್ಥಳದಿಂದ ಸಂಗ್ರಹಿಸಲಾದ ಸಿಸಿಟಿವಿ ವಿಡಿಯೋ ಮಾರ್ಗದಲ್ಲಿ ಬಿದ್ದ ಅವಶೇಷಗಳನ್ನು ತೋರಿಸಿದೆ.
ಶ್ರೀ ಮಾತಾ ವೈಷ್ಣೋದೇವಿ ದೇಗುಲದ ಟ್ರ್ಯಾಕ್‌ನಲ್ಲಿ ಕಲ್ಲುಗಳು ಉರುಳಿ, ಭೂಕುಸಿತ ಸಂಭವಿಸಿದೆ. ಹವಾಮಾನ ಇಲಾಖೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ಸೆಪ್ಟೆಂಬರ್ 12ರವರೆಗೆ ಮುನ್ಸೂಚನೆ ನೀಡಿದೆ. ಶ್ರೀ ಮಾತಾ ವೈಷ್ಣೋದೇವಿ ದೇಗುಲ ಮಂಡಳಿಯ ವಿಪತ್ತು ನಿರ್ವಹಣಾ ತಂಡವು ಸ್ಥಳಕ್ಕೆ ತಲುಪಿದೆ ಎಂದು ಶ್ರೀ ಮಾತಾ ವೈಷ್ಣೋ ದೇವಿ ದೇಗುಲ ಮಂಡಳಿಯ ಸಿಇಒ ತಿಳಿಸಿದ್ದಾರೆ.
ಕೇಂದ್ರಾಡಳಿತ ಪ್ರದೇಶವು ಕೆಲವು ದಿನಗಳಲ್ಲಿ ಪ್ರತ್ಯೇಕ ಭಾಗಗಳಲ್ಲಿ ಅಲ್ಪಾವಧಿಯ ಮಳೆಗೆ ಸಾಕ್ಷಿಯಾಗಲಿದೆ. ಇಂದು ಮುಂಜಾನೆ, ಭಾರೀ ಮಳೆಯಿಂದ ಉಂಟಾದ ಭೂಕುಸಿತಗಳು ಉತ್ತರಾಖಂಡದ ಚಮೋಲಿ ಜಿಲ್ಲೆಯ ಬದರಿನಾಥ್ ರಾಷ್ಟ್ರೀಯ ಹೆದ್ದಾರಿಯನ್ನು ಹಲವಾರು ಕಡೆಗಳಲ್ಲಿ ನಿರ್ಬಂಧಿಸಿವೆ.
ಪಗಲ್ನಾಳ, ಪಾತಾಳಗಂಗಾ ಮತ್ತು ನಂದಪ್ರಯಾಗದಲ್ಲಿ ಹೆದ್ದಾರಿಯನ್ನು ನಿರ್ಬಂಧಿಸಲಾಗಿದೆ. ಅದನ್ನು ಮತ್ತೆ ತೆರೆಯುವ ಪ್ರಯತ್ನಗಳು ನಡೆಯುತ್ತಿವೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರವು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದೆ. ಸಿಮ್ಲಿ ಮಾರುಕಟ್ಟೆಯ 7 ಅಂಗಡಿಗಳು ಭೂಕುಸಿತದಿಂದ ಹಾನಿಗೊಳಗಾಗಿವೆ ಎಂದು ಅದು ಹೇಳಿದೆ.
Poll (Public Option)

Post a comment
Log in to write reviews