2024-12-24 06:20:11

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ದ್ವಿಚಕ್ರ ವಾಹನಗಳು ಮುಖಾಮುಖಿ: ಇಬ್ಬರು ಸಾವು

ರಾಯಚೂರು: ಎರಡು ದ್ವಿಚಕ್ರ ವಾಹನಗಳು ಮುಖಾಮುಖಿಯಾಗಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ಸಿಎಸ್​​ಎಫ್ ಕ್ಯಾಂಪ್ ಚರ್ಚ್ ಬಳಿ ಶುಕ್ರವಾರ ಸಂಭವಿಸಿದೆ.

ಜವಳಗೇರಾ ಗ್ರಾಮದ ಮುದಿಯಾ ಥಾಮಸ್ (40) ಹಾಗೂ ಧುಮತಿ ಗ್ರಾಮದ ಶೇಕ್ಷಾವಲಿ ದರ್ಗಾಸಾಬ್ (20) ಮೃತರೆಂದು ಎಂದು ಗುರುತಿಸಲಾಗಿದೆ.

ಮದಿಯಾ ಥಾಮಸ್ ಜವಳಗೇರಾದಿಂದ ಸಿಎಸ್ಎಫ್​ಗೆ ಹೋಗುತ್ತಿದ್ದರೆ, ಶೇಕ್ಷಾವಲಿ ಸಿಎಸ್ಎಫ್​ನಿಂದ ಜವಳಗೇರಾ ಗ್ರಾಮಕ್ಕೆ ತೆರಳುವ ವೇಳೆ ಅಪಘಾತ ದುರಂತ ಸಂಭವಿಸಿದೆ. ಬೈಕ್​ಗಳ ಹಿಂಬದಿಯಲ್ಲಿ ಕುಳಿತಿದ್ದ ಜವಳಗೇರಾದ ಯಂಕಪ್ಪ, ಧುಮತಿಯ ಮುಸ್ತಫಾ ಎಂಬವರಿಗೆ ಗಂಭೀರ ಗಾಯಗಳಾಗಿದ್ದು, ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post a comment

No Reviews