ಐದು ವರ್ಷದ ಬಾಲಕಿ ಮೇಲೆ ಎರಡು ರಾಟ್‌ವೀಲರ್ ನಾಯಿಗಳು ದಾಳಿ ಮಾಡಿದ ಪ್ರಕರಣ ಚೆನ್ನೈನ ಥೌಸಂಡ್ ಲೈಟ್ಸ್ ಉದ್ಯಾನವನದಲ್ಲಿ ನಡೆದಿದೆ. ದಾಳಿಗೊಳಗಾದ ಬಾಲಕಿ ಸುದಕ್ಷ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ನಾಯಿಗಳ ಮಾಲೀಕ ಅವುಗಳನ್ನು ಹರಿ ಬಿಟ್ಟ ಪರಿಣಾಮ ನಾಯಿಗಳು ಬಾಲಕಿ ಮೇಲೆ ದಾಳಿ ನಡೆಸಿದೆ. ದಾಳಿ ನಡೆದ ತಕ್ಷಣ ಬಾಲಕಿಯ ತಾಯಿ ಧಾವಿಸಿ ಆಕೆಯನ್ನು ನಾಯಿಯಿಂದ ರಕ್ಷಿಸಿದ್ದಾರೆ.
ನಾಯಿ ಮಾಲೀಕರನ್ನು ಬಂಧಿಸಿದ್ದೇವೆ ಮತ್ತು ನಾಯಿಗಳನ್ನು ನೋಡಿಕೊಳ್ಳುವ ಇತರ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಶೇಖರ್ ದೇಶಮುಖ್ ತಿಳಿಸಿದ್ದಾರೆ.
Post a comment
Log in to write reviews