
ಹಾವೇರಿ: ಭಾರೀ ಗಾಳಿ ಮಳೆಗೆ ಮರವೊಂದು ಉರುಳಿ ಬಿದ್ದು ಜಿಲ್ಲೆಯ ಹಿರೇಕೆರೂರು ಪಟ್ಟಣದಲ್ಲಿ ಬೈಕ್ ಸವಾರರು ಮೃತಪಟ್ಟಿದ್ದಾರೆ.
ಗಾಳಿ ಮಳೆಗೆ ಮರವೊಂದು ಉರುಳಿ, ನೇರವಾಗಿ ಬೈಕ್ ಸವಾರರ ಮೇಲೆ ಬಿದ್ದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹಿರೇಕೆರೂರಿನಲ್ಲಿ ಹೆಸ್ಕಾಂ ನೌಕರರಾಗಿದ್ದ ಮಂಜುನಾಥ (35), ಹನುಮಂತಪ್ಪ (25) ಮೃತ ದುರ್ದೈವಿಗಳು. ಚಿನ್ನಮುಳುಗುಂದ ಗ್ರಾಮದ ನಿವಾಸಿ ಮಂಜುನಾಥ, ಯತ್ತಿನಹಳ್ಳಿ ಗ್ರಾಮದ ನಿವಾಸಿ ಹನುಮಂತಪ್ಪ ಊಟ ಮುಗಿಸಿ ಹೆಸ್ಕಾಂ ಕಚೇರಿಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಏಕಾಏಕಿ ಮರವೊಂದು ಉರುಳಿ ಬಿದ್ದಿದೆ. ಮರ ಬಿದ್ದ ರಭಸಕ್ಕೆ ಇಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಹಿರೇಕೆರೂರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
Poll (Public Option)

Post a comment
Log in to write reviews