
ಮಂಡ್ಯ:ಕಲುಷಿತ ನೀರು ಸೇವಿಸಿ ಇಬ್ಬರು ವೃದ್ಧರು ಸಾವನ್ನಪ್ಪಿ, ಮೂವರು ಸ್ಥಿತಿ ಗಂಭೀರವಾದ ಘಟನೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಮಾರೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಜವರಮ್ಮ ಹಾಗೂ ಚಿಕ್ಕಮ್ಮ ಎಂಬ ವೃದ್ಧರು ಸಾವನ್ನಪ್ಪಿದ್ದಾರೆ 12 ಮಂದಿ ಅಸ್ವಸ್ಥಗೊಂಡಿದ್ದು ಮೂವರ ಸ್ಥಿತಿ ಗಂಭೀರವಾಗಿದೆ.
ಹಾಸನ ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಮೂವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಉಳಿದ ಅಸ್ವಸ್ಥರು ಚನ್ನರಾಯಪಟ್ಟಣ ಹಾಗೂ ಶ್ರವಣಬೆಳಗೊಳ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಘಟನೆ ನಡೆದು 4-5 ದಿನ ಕಳೆದರೂ ಆರೋಗ್ಯ ಇಲಾಖೆ ಯಾವುದೇ ಕ್ರಮವಹಿಸಿಲ್ಲ. ಮಂಗಳವಾರ ವೃದ್ಧರಿಬ್ಬರು ಸಾವನ್ನಪ್ಪಿದರೂ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿಲ್ಲ. ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ನಡೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಕ್ರಮವಹಿಸಬೇಕು ಎಂದು ಗ್ರಾಮಸಸ್ಥರು ಆಗ್ರಹಿಸಿದ್ದಾರೆ.
Poll (Public Option)

Post a comment
Log in to write reviews