
ಚಿಕ್ಕೋಡಿ: ಪಶ್ಚಿಮ ಘಟ್ಟಗಳಲ್ಲಿ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಯಲ್ಲಿ ಕೃಷ್ಣ, ಘಟಪ್ರಭಾ ನದಿಗಳು ಮೀತಿ ಮೀರಿ ಉಕ್ಕಿ ಹರಿಯುತ್ತಿದೆ. ಇದರಿಂದಾಗಿ ಚಿಕ್ಕೋಡಿ ಹಾಗೂ ನಿಪ್ಪಾಣಿ ಭಾಗಗಳಲ್ಲಿ ನೆರೆಯ ಭೀತಿ ಉಂಟಾಗಿದೆ.
ಚಿಕ್ಕೋಡಿ ಹಾಗೂ ನಿಪ್ಪಾಣಿ ಭಾಗಗಳಲ್ಲಿ ನೆರೆಯಿಂದ ಸೇತುವೆಗಳ ಮೇಲೆ ನೀರು ಹರಿಯುತ್ತಿದೆ ಅಲ್ಲದೆ ರಸ್ತೆಯಲ್ಲಿ ನೀರು ನಿಂತಿರುವುದರಿಂದ ಶಾಲೆ ಕಾಲೇಜು ವಿದ್ಯರ್ಥಿಗಳಿಗೆ ಓಡಾಡಲು ಕಷ್ಟವಾಗಿದೆ. ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕುಗಳ ಶಾಲಾ-ಕಾಲೇಜುಗಳಿಗೆ 2ದಿನ ಅಂದರೆ ಜೂಲೈ 25 ಹಾಗೂ 26ರಂದು ರಜೆಯನ್ನ ಘೋಷಿಸಿಸಲಾಗಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಅವರು ಹೇಳಿದ್ದಾರೆ.
Poll (Public Option)

Post a comment
Log in to write reviews