2024-12-24 06:19:04

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಭರದಿಂದ ಸಾಗುತ್ತಿದೆ ತುಮಕೂರು ನೇರ ರೈಲು ಕಾಮಗಾರಿ

ದಾವಣಗೆರೆ: ದಾವಣಗೆರೆ - ಚಿತ್ರದುರ್ಗ - ತುಮಕೂರು ನೇರ ರೈಲು ಯೋಜನೆ ಕಾಮಗಾರಿ ಭರದಿಂದ ಸಾಗುತ್ತಿದ್ದು, 2027ರ ಜನವರಿಯೊಳಗೆ ಈ ಕಾಮಗಾರಿಯು ಪೂರ್ಣಗೊಳ್ಳಲಿದೆ. ಕೇಂದ್ರ ರೈಲ್ವೆ ಸಹಾಯಕ ಖಾತೆ ಸಚಿವ ವಿ.ಸೋಮಣ್ಣನವರು ಈ ಕಾಮಗಾರಿಯನ್ನು ಪ್ರಧಾನಿ ಮೋದಿ ಅವರು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

2011-12ರಲ್ಲೇ ಕೇಂದ್ರ ಸರ್ಕಾರದಿಂದ ಈ ಯೋಜನೆಗೆ ಮಂಜೂರಾತಿ ಸಿಕ್ಕಿತ್ತು. ಒಟ್ಟು 2.140 ಕೋಟಿ ವೆಚ್ಚದಲ್ಲಿ ಯೋಜನೆ ಅನುಷ್ಠಾನ ಆಗುತ್ತಿದೆ. 2019 ರೊಳಗೆ ಅ ಕಾಮಗಾರಿ ಪೂರ್ಣಗೊಳಿಸಲು ಉದ್ದೇಶಿಸಲಾಗಿತ್ತು. ಅದರೆ, ಕಾರಣಾಂತರಗಳಿಂದ ತಡವಾಗಿತ್ತು.‌ ಸಚಿವ ವಿ.ಸೋಮಣ್ಣನವರು ಈ ಕಾಮಗಾರಿಯ ಕುರಿತು ದಾವಣಗೆರೆಯಲ್ಲಿ ಸಭೆ ನಡೆಸಿದ್ದು, ಎರಡು ವರ್ಷದಲ್ಲಿ ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲ್ವೆ ಕಾಮಗಾರಿಯನ್ನು ಮುಗಿಸುವ ಗುರಿ ಹೊಂದಲಾಗಿದೆ ಎಂದಿದ್ದಾರೆ. ಇದರಿಂದ ದಾವಣಗೆರೆ ಜನರು ಕೇವಲ 2 ಗಂಟೆಗಳಲ್ಲೇ ಬೆಂಗಳೂರು ತಲುಪಬಹುದಾಗಿದೆ.

ಬೆಂಗಳೂರು ತಲುಪಲು ಒಟ್ಟು 327 ಕಿ.ಮೀ ಕ್ರಮಿಸಬೇಕಾಗಿತ್ತು.‌ ಆದರೆ ಇದೀಗ ನೇರ ರೈಲು ಮಾರ್ಗದಿಂದ ಒಟ್ಟು 196 ಕಿ.ಮೀ ಮಾತ್ರ ಪ್ರಯಾಣದ ಅಗತ್ಯವಿದೆ.‌ ಬರೊಬ್ಬರಿ 60 ಕಿ.ಮೀ ಪ್ರಯಾಣ ಕಡಿತವಾಗಲಿದೆ. ಇದರಿಂದ ಜನರಿಗೆ ಹಣ, ಸಮಯ ಹಾಗೂ ಪ್ರಯಾಣವೂ ಕಡಿಮೆಯಾಗಲಿದೆ.

ದಾವಣಗೆರೆ ಜಿಲ್ಲೆಯಲ್ಲಿ ಈಗಾಗಲೇ ಕಾಮಗಾರಿ ನಡೆಯುತ್ತಿದ್ದು, ದಾವಣಗೆರೆ - ಭರಮಸಾಗರ - ಚಿತ್ರದುರ್ಗ ಮಧ್ಯದಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ನಡೆದಿದೆ.‌ ಜಮೀನಿನಲ್ಲಿ ರೈತರು ಬೆಳೆಗಳನ್ನು ಬೆಳೆದಿದ್ದು, ಅವರಿಗೆ ತೊಂದರೆಯಾಗದಂತೆ, ಕಟಾವಿನ ಬಳಿಕವೇ ರೈಲ್ವೆ ಕಾಮಗಾರಿ ಆರಂಭಿಸುವಂತೆ ಸಚಿವ ಸೋಮಣ್ಣ ಅಧಿಕಾರಿಗಳಿಗೆ ಈ ಹಿಂದೆಯೇ ಸೂಚನೆ ನೀಡಿದ್ದರು.

ದಾವಣಗೆರೆ ಜಿಲ್ಲೆಯಲ್ಲಿ ನೇರ ರೈಲ್ವೆ ಮಾರ್ಗ ಯೋಜನೆಗೆ ಒಟ್ಟು 236 ಎಕರೆ ಭೂಮಿ ಅಗತ್ಯವಿತ್ತು. ಈ ಪೈಕಿ ಒಟ್ಟು 234 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ರೈಲ್ವೆ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ. ಉಳಿದ 2 ರಿಂದ 3 ಎಕರೆ ಮಾತ್ರ ಸ್ವಾಧೀನ ಬಾಕಿಯಿದೆ. ಎಲ್ಲ ಪ್ರಕ್ರಿಯೆನ್ನು  3-4 ತಿಂಗಳಲ್ಲಿ ಮುಗಿಸಿ, ಬಾಕಿಯಿರುವ 4-5 ಕಾಮಗಾರಿ ಆರಂಭಿಸುವುದಾಗಿ ಸಚಿವ ವಿ.ಸೋಮಣ್ಣ ಮಾಹಿತಿ ನೀಡಿದರು.

2.140  ಕೋಟಿ ರೂ. ವೆಚ್ಚದಲ್ಲಿ ಯೋಜನೆ ಅನುಷ್ಠಾನವಾಗುತ್ತಿದೆ. ಪ್ರಧಾನಿ ಮೋದಿ ಹೆಚ್ಚಿನ ಕಾಳಜಿ ವಹಿಸಿ, 2027ಕ್ಕೆ ಲೋಕಾರ್ಪಣೆ ಮಾಡಬೇಕು ಎಂದು ತಿಳಿಸಿದ್ದಾರೆ.ಈ ಮಾರ್ಗದಲ್ಲಿ ರೈಲು ಕಾಣದ ಹಳ್ಳಿಗಳು, ತಾಲೂಕುಗಳು ಸೇರಿವೆ. ಒಟ್ಟು 16 ಹೊಸ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ.‌ ತುಮಕೂರು (ಹಳೆ ನಿಲ್ದಾಣ), ಉರಕೆರೆ ತಿಮ್ಮರಾಜನಹಳ್ಳಿ, ಜೋಗಿಹಳ್ಳಿ, ಚಿಕ್ಕನಹಳ್ಳಿ, ಶಿರಾ, ತಾವರೆಕೆರೆ, ಆನೆಸಿದ್ರಿ, ಹಿರಿಯೂರು ಮೇಟಿ ಕುರ್ಕೆ, ಐಮಂಗಲ, ಪಾಲವ್ವನಹಳ್ಳಿ, ದೊಡ್ಡಸಿದ್ಧವನಹಳ್ಳಿ, ಚಿತ್ರದುರ್ಗ  (ಹಳೆ ನಿಲ್ದಾಣ), ಸಿರಿಗೆರೆ ಕ್ರಾಸ್‌, ಭರಮಸಾಗರ ಹೆಬ್ಬಾಳು, ಆನಗೋಡು, ತೋಳಹುಣಸೆ (ಹಳೆ ನಿಲ್ದಾಣ), ದಾವಣಗೆರೆ (ಹಳೆ ನಿಲ್ದಾಣ) ನಿಲ್ದಾಣಗಳು ಎಂದು ಗುರುತಿಸಲಾಗಿದೆ.

Post a comment

No Reviews