
ಬೆಂಗಳೂರು: ಲೈಂಗಿಕ ಪ್ರಕರಣದ ಆರೋಪಿ ಪ್ರಜ್ವಲ್ ಅವರನ್ನು ಇಂದು(ಭಾನುವಾರ ಜೂನ್ 10) ಎಸ್ಐಟಿ ತಂಡ ಬೆಂಗಳೂರು ನಿವಾಸಕ್ಕೆ ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸಿದೆ. ಇದೇ ವೇಳೆ ಭವಾನಿ ರೇವಣ್ಬನ ತುಳಸಿ ಪೂಜೆಯಲ್ಲಿ ತೊಡಗಿದ್ದು ಮಗ ಮತ್ತು ತಾಯಿ ಮುಖಾಮುಖಿಯಾದರೂ ಮಾತನಾಡಲು ಎಸ್ಐಟಿ ಅವಕಾಶ ಮಾಡಿಕೊಟ್ಟಿಲ್ಲ.
ಪ್ರಜ್ವಲ್‌ನನ್ನು ಇಂದು ನ್ಯಾಯಾಲಯಕ್ಕೆ ಹಾಜರು ಮಾಡುವ ಮುನ್ನ ಬೆಂಗಳೂರಿನ ಬಸವನಗುಡಿಯ ನಿವಾಸದಲ್ಲಿ ಮಹಜರ್ ಪ್ರಕ್ರಿಯೆ ನಡೆಸಿದರು. ಒಂದೂವರೆ ಗಂಟೆಗಳಿಂದ ಸುದೀರ್ಘ ಮಹಜರು ಪ್ರಕ್ರಿಯೆ ನಡೆಸಲಾಗಿದ್ದು ಮನೆಯ ಇಂಚಿಂಚು ಶೋಧನೆ ಮಾಡಿ ಪ್ರಕ್ರಿಯೆ ಮಾಡಿದ ಎಸ್ಐಟಿ ತಂಡ ಮಹಜರಿನ ವೀಡಿಯೋ ರೆಕಾರ್ಡ್ ಮಾಡಿಕೊಂಡಿದೆ. ಈ ವೇಳೆ ಸ್ಥಳದಲ್ಲಿ ಬಿಗಿ ಭದ್ರತೆ ಒದಗಿಸಲಾಗಿತ್ತು. ಪ್ರಜ್ವಲ್ ತಾಯಿ ಭವಾನಿ ರೇವಣ್ಣ ಅಸೌಖ್ಯದ ಕಾರಣ ಹೇಳಿ ಮನೆಯಲ್ಲೇ ಇದ್ದು ಮಹಜರು ಕಾರ್ಯಕ್ಕೆ ಅಡ್ಡಿ ಪಡಿಸದಂತೆ ಎಚ್ಚರಿಕೆ ನೀಡಲಾಗಿತ್ತು.
ಪ್ರಜ್ವಲ್ ಮನೆಯಲ್ಲಿ ತನ್ನನ್ನು ಲೈಂಗಿಕವಾಗಿ ಕಿರುಕುಳಕ್ಕೆ ಒಳಪಡಿಸಲಾಗಿದೆ ಎಂದು ಸಂತ್ರಸ್ತೆ ತೋರಿಸಿದ ಕೊಠಡಿ ಮಹಜರು ಮಾಡಲಾಗಿದೆ. ಈ ಸಂದರ್ಭದಲ್ಲಿ ಭವಾನಿ ರೇವಣ್ಣ ಮೊದಲ ಮಹಡಿಯಲ್ಲಿ ತುಳಸಿಕಟ್ಟೆಗೆ ಪೂಜೆ ಸಲ್ಲಿಸಿದರು ಎನ್ನಲಾಗಿದೆ.
Poll (Public Option)

Post a comment
Log in to write reviews