ಬೆಂಗಳೂರು: ಟ್ರಾಫಿಕ್ ನಿರ್ವಹಣೆ ಭಾರೀ ಕಷ್ಟಕರವಾಗಲಿದೆ ಎಂದು ಬಿಬಿಎಂಪಿ (BBMP), ಸಾರಿಗೆ ಇಲಾಖೆ ಟ್ರಾಫಿಕ್ ಪೊಲೀಸ್ (Traffic Police), ನಗರ ಭೂ ಸಾರಿಗೆ ನಿರ್ದೇಶನಾಲಯದಿಂದ ನಡೆಸಿದ ಸಮೀಕ್ಷೆಯಿಂದ ಕಂಡುಬಂದಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನ ಜನಗಳನ್ನು ಕಾಡುವ ಟ್ರಾಫಿಕ್ ಸಂಕಟ ಹೆಚ್ಚಾಗಿದೆ.ಇದು ಇನ್ನು ಮುಂದಿನ ಹಲವು ವರ್ಷಗಳಲ್ಲಿ ಇನ್ನಷ್ಟು ಬಿಗಡಾಯಿಸಲಿದೆಯಂತೆ ಎನ್ನಲಾಗಿದೆ. ಎಷ್ಟರ ಮಟ್ಟಿಗೆ ಎಂದರೆ, ಪ್ರತಿ ಸಿಗ್ನಲ್‌ನಲ್ಲಿಯೂ 10-12 ನಿಮಿಷ ಕಾಯುವ ಸ್ಥಿತಿ ಶೀಘ್ರದಲ್ಲೇ ಬರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಬೆಂಗಳೂರಿನ ರಸ್ತೆಗೆ ಪ್ರತಿ ದಿನ 2000 ಹೊಸ ವಾಹನಗಳು ಇಳಿಯುತ್ತಿವೆ. ಸದ್ಯ ರಾಜಧಾನಿಯಲ್ಲಿ ಸುಮಾರು 1.18 ಕೋಟಿ ವಾಹನಗಳು ಇವೆ. ಮುಂದಿನ ನಾಲ್ಕು ತಿಂಗಳಲ್ಲಿ 2 ಲಕ್ಷ ಹೊಸ ವಾಹನಗಳು ನಗರಕ್ಕೆ ಸೇರ್ಪಡೆಯಾಗಲಿವೆ. 2024ರ ಅಂತ್ಯಕ್ಕೆ 1 ಕೋಟಿ 21 ಲಕ್ಷ ವಾಹನಗಳು ಬೆಂಗಳೂರಿನಲ್ಲಿ ನೋಂದಣಿಯಾಗಿರಲಿವೆ. ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಹೊಸದಾಗಿ ನೋಂದಣಿಯಾಗಿ ಬೆಂಗಳೂರಿಗೆ ಬರುವ ವಾಹನಗಳ ಸಂಖ್ಯೆ ನಿತ್ಯ ಸುಮಾರು 1000 ವಾಹನಗಳು ಹೊರ ರಾಜ್ಯದಿಂದ, ಜಿಲ್ಲೆಯಿಂದ ಬೆಂಗಳೂರಿಗೆ ಬಂದು ಹೋಗುವ ವಾಹನಗಳ ಸಂಖ್ಯೆ 1 ಲಕ್ಷ ಮೀರಬಹುದು ಎನ್ನಲಾಗಿದೆ.
ಇದೆಲ್ಲ ಲೆಕ್ಕಾಚಾರ ಗಮನಿಸಿದರೆ 2025ರಿಂದ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಮಿತಿ ಮೀರಲಿದೆ. ಬೆಂಗಳೂರಿನ 162 ಜಂಕ್ಷನ್‌ಗಳಲ್ಲಿ ಕನಿಷ್ಠ 10-11 ನಿಮಿಷ ಕಾಯುವ ಸಂಕಷ್ಟದ ಸ್ಥಿತಿ ತಲೆದೋರಲಿದೆ. ಕೆ.ಆರ್ ಸರ್ಕಲ್, ಸಿಲ್ಕ್ ಬೋರ್ಡ್, ಓಲ್ಡ್ ಏರ್‌ಪೋರ್ಟ್ ರಸ್ತೆ, ಚಾಲುಕ್ಯ, ಎಲೆಕ್ಟ್ರಾನಿಕ್ ಸಿಟಿ, ಟೌನ್‌ಹಾಲ್ ಸೇರಿದಂತೆ 162 ಜಂಕ್ಷನ್‌ಗಳು ಈ ಕಂಟಕ ಎದುರಿಸಲಿವೆ. ಒಂದು ಜಂಕ್ಷನ್ ದಾಟಲು ಕನಿಷ್ಠ 10 ನಿಮಿಷವಾದರೂ ತೆಗೆದುಕೊಳ್ಳಬಹುದು. ಸಿಲ್ಕ್ ಬೋರ್ಡ್ ಸಿಗ್ನಲ್‌ನಲ್ಲಿ ಈಗಾಗಲೇ ಐದರಿಂದ ಎಂಟು ನಿಮಿಷ ಕಾಯಬೇಕಾದ ಸ್ಥಿತಿ ಬರುತ್ತಿದೆ. ನಗರ ಭೂ ಸಾರಿಗೆ ನಿರ್ದೇಶನಾಲಯದ ಸರ್ವೆಯಲ್ಲಿ ಈ ಮಾಹಿತಿ ಬಹಿರಂಗವಾಗಿದ್ದು, ಆದರೆ ಇದು ದೊಡ್ಡ ಮಟ್ಟದಲ್ಲಿ ಕಾನೂನಾತ್ಮಕ ಸಮರಕ್ಕೆ ಹಾದಿ ಮಾಡಿಕೊಡಲಿದೆ. ಇದಕ್ಕಾಗಿ ಸರ್ಕಾರ ಸುರಂಗ ಮಾರ್ಗ, ಫ್ಲೈಓವರ್, ಅಂಡರ್‌ಪಾಸ್, ಮ್ಯಾಜಿಕ್ ಬಾಕ್ಸ್ ಇತ್ಯಾದಿಗಳ ಮೊರೆ ಹೋಗುತ್ತಿದೆ.
Post a comment
Log in to write reviews