ಬೆಂಗಳೂರು: ಲೋಕಸಭಾ ಚುನಾವಣೆಯ ಮತ ಎಣಿಕೆ ನಾಳೆ (ಮಂಗಳವಾರ) ನಡೆಯಲಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಮೂರು ಮತ ಎಣಿಕಾ ಕೇಂದ್ರಗಳ ಸುತ್ತಮುತ್ತ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.
ಮತ ಎಣಿಕೆ ನಡೆಯಲಿರುವ ಕೇಂದ್ರಗಳಾದ ವಸಂತನಗರದ ಮೌಂಟ್ ಕಾರ್ಮೆಲ್ ಕಾಲೇಜು (Mount Carmel college), ಜಯನಗರದ ಎಸ್ಎಸ್ಎಂಆರ್ವಿ ಕಾಲೇಜು ( SSMRV college), ಬೆಂಗಳೂರು ಕೇಂದ್ರ ವಿಭಾಗದಲ್ಲಿರುವ ಸೇಂಟ್ ಜೋಸೆಫ್ ಕಾಲೇಜುಗಳ (Saint Joseph college)ಬಳಿ ಸಾರ್ವಜನಿಕರು ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ಬೆಳೆಗ್ಗೆ 6 ಗಂಟೆಯಿಂದ ಮತ ಎಣಿಕೆ ಮುಗಿಯುವವರೆಗೂ ವಾಹನ ಸಂಚಾರ ಮಾರ್ಪಾಡು ಮಾಡಿ ಬೆಂಗಳೂರು ಸಂಚಾರಿ ಪೊಲೀಸರು ಆದೇಶ ಹೊರಡಿಸಿದದ್ದಾರೆ.
ಮೌಂಟ್ ಕಾರ್ಮೆಲ್ ಕಾಲೇಜು ಹತ್ತಿರದ ಸಂಚಾರ ನಿರ್ಬಂಧಿತ ರಸ್ತೆಗಳು
* ಪ್ಯಾಲೇಸ್ ರಸ್ತೆಯ ವಸಂತನಗರ ಕೆಳ ಸೇತುವೆ ಜಂಕ್ಷನ್ನಿಂದ ಮಿನುಗುತಾರೆ ಕಲ್ಪನಾ ಜಂಕ್ಷನ್ ವರೆಗೆ.
* ಮಿನುಗುತಾರೆ ಕಲ್ಪನಾ ಜಂಕ್ಷನ್ನಿಂದ ಪ್ಯಾಲೇಸ್ ರಸ್ತೆಯ ವಸಂತನಗರ ಕೆಳ ಸೇತುವೆ ಜಂಕ್ಷನ್ ವರೆಗೆ.
ಎಸ್ಎಸ್ಎಂಆರ್ವಿ ಕಾಲೇಜು ಹತ್ತಿರದ ಸಂಚಾರ ನಿರ್ಬಂಧಿತ ರಸ್ತೆಗಳು:
* 18ನೇ ಮುಖ್ಯ ರಸ್ತೆ ಮತ್ತು 28ನೇ ಮುಖ್ಯ ರಸ್ತೆಯ ಮಧ್ಯದಲ್ಲಿ ಬರುವ 36ನೇ ಕ್ರಾಸ್.
* 32ನೇ ಇ ಕ್ರಾಸ್ ರಸ್ತೆ ಮತ್ತು 39ನೇ ಕ್ರಾಸ್ ರಸ್ತೆ ಜಂಕ್ಷನ್ ನಡುವೆ ಬರುವ 26ನೇ ಮುಖ್ಯ ರಸ್ತೆ.
ಸೇಂಟ್ ಜೋಸೆಫ್ ಕಾಲೇಜು ಹತ್ತಿರದ ವಾಹನಗಳ ನಿಲುಗಡೆ ನಿಷೇಧಿತ ರಸ್ತೆಗಳು
• ಕೆಬಿ ರಸ್ತೆ – ಎಚ್ಎಲ್ಡಿ ಜಂಕ್ಷನ್ನಿಂದ ಕ್ವಿನ್ಸ್ ಜಂಕ್ಷನ್.
* ಕೆ.ಜಿ.ರಸ್ತೆ – ಪೊಲೀಸ್ ಕಾರ್ನರ್ ಜಂಕ್ಷನ್ ನಿಂದ ಮೈಸೂರು ಬ್ಯಾಂಕ್ ಜಂಕ್ಷನ್.
* ನೃಪತುಂಗ ರಸ್ತೆ – ಕೆಆರ್ ಜಂಕ್ಷನ್ ನಿಂದ ಪೊಲೀಸ್ ಕಾರ್ನರ್.
* ಕೀನ್ಸ್ ರಸ್ತೆ – ಬಾಳೇಕುಂದ್ರಿ ವೃತ್ತದಿಂದ ಸಿಟಿಒ.
* ಸೆಂಟ್ರಲ್ ಸ್ಟ್ರೀಟ್ ರಸ್ತೆ – ಬಿಆರ್ವಿ ಜಂಕ್ಷನ್ನಿಂದ ಅನಿಲ್ ಕುಂಬ್ಳೆ ವೃತ್ತ,
* ಎಂಜಿ ರಸ್ತೆ – ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ಜಂಕ್ಷನ್
* ಆರ್ ಆರ್ ಎಂ ಆರ್ ರಸ್ತೆ – ರಿಚ್ಮಂಡ್ ವೃತ್ತದಿಂದ ಹಡ್ಸನ್ ಜಂಕ್ಷನ್.
* ವಿಠಲ್ ಮಲ್ಯ ರಸ್ತೆ – ಸಿದ್ದಲಿಂಗಯ್ಯ ವೃತ್ತದಿಂದ ರಿಚ್ಮಂಡ್.
* ಎನ್.ಆರ್.ರಸ್ತೆ – ಹಡ್ಸನ್ ವೃತ್ತದಿಂದ ಟೌನ್ ಹಾಲ್ ಜಂಕ್ಷನ್ ವರೆಗೆ.
ಇನ್ನು ಪಾರ್ಕಿಂಗ್ ಮಾಡಬಯಸುವವರು ಸೇಂಟ್ ಜೋಸೆಫ್ ಕಾಲೇಜು ಮೈದಾನ ಹಾಗೂ ಕಂಠೀರವ ಸ್ಟೇಡಿಯಂ ಪಾರ್ಕಿಂಗ್ ಸ್ಥಳವನ್ನು ಬಳಸಬಹುದಾಗಿದೆ.
Post a comment
Log in to write reviews