
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಧ್ಯಾಹ್ನವೇ ಧಾರಕಾರ ಮಳೆಯಾಗಿದೆ.ದಿಢೀರ್ ತುಂತುರು ಮಳೆಯಿಂದ ವಾಹನ ಸವಾರರು ಪರದಾಟ ನಡೆಸಿದ್ದು, ಚಾಮರಾಜಪೇಟೆ, ಯಶವಂತಪುರ, ಕೆ ಆರ್ ಮಾರ್ಕೆಟ್, ಶಾಂತಿನಗರ ಹಾಗೂ ಕಾರ್ಪೋರೇಶನ್, ಆರ್ ಟಿ ನಗರ, ಸುತ್ತಾಮುತ್ತ ಧಾರಕಾರ ಮಳೆ ಆರಂಭವಾಗಿದೆ.
ಇನ್ನು ಮಳೆಗೆ ಕೆ.ಆರ್.ಸರ್ಕಲ್ ಬಳಿ ನೀರು ನಿಂತು ರಸ್ತೆ ಹೊಳೆಯಂತಾಗಿದೆ. ರಸ್ತೆಯಲ್ಲಿ ನಿಂತ ನೀರಲ್ಲೇ ವಾಹನಗಳ ಸಂಚಾರ ಮಾಡುತ್ತಿದ್ದು, ಸಂಚಾರ ವ್ಯತ್ಯಯವಾಗಿದೆ. ಇನ್ನೂ ಬೆಂಗಳೂರು ಸೇರಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಹಾವೇರಿ, ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Poll (Public Option)

Post a comment
Log in to write reviews