
ಬೆಂಗಳೂರು : ವಿದ್ಯುತ್ ಕಾಮಗಾರಿ ಹಿನ್ನಲ್ಲೆ ಬೆಂಗಳೂರಿನಲ್ಲಿ ಆಗಸ್ಟ 10 ರಂದು. ಬೆಸ್ಕಾಂನ 66/11 ಕೆವಿ 'ಸಿ' ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯ ಕೈಗೊಳ್ಳುವ ಹಿನ್ನೆಲೆ ಶನಿವಾರ ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ನಗರದ ಹಲವೆಡೆ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಬೆಂಗಳೂರು ಪೂರ್ವ ವೃತ್ತದ ಬೆಸ್ಕಾಂ ಅಧೀಕ್ಷಕ ಇಂಜಿನಿಯರ್ ತಿಳಿಸಿದ್ದಾರೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ ಇದರ ಬಗ್ಗೆ ಸಂಪೂರ್ಣ ಮಾಹಿತಿ
ಬ್ರಾಡ್ ವೇ ರಸ್ತೆ, ಸ್ಟೇಷನ್ ರಸ್ತೆ, ಕ್ವೀನ್ಸ್ ರಸ್ತೆ, ತಿಮ್ಮಯ್ಯ ರಸ್ತೆ, ಸ್ಲಾಟರ್ ಹೌಸ್ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ. ಅಲ್ಲದೆ, ಕನ್ನಿಂಗ್ ಹ್ಯಾಮ್ ರಸ್ತೆ, ಆಲಿ ಆಸ್ಕರ್ ರಸ್ತೆ, ಆಲಿ ಆಸ್ಕರ್ ರಸ್ತೆ ಕ್ರಾಸ್, ಚಿಕ್ಕ ಬಜಾರ್ ರಸ್ತೆ, ವೆಂಕಟಪ್ಪ ರಸ್ತೆ, ಮುನಿಸ್ವಾಮಿ ರಸ್ತೆಯಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ. ಪಾಯಪ್ಪ ಗಾರ್ಡನ್, ಸಿಮೆಂಟ್ರಿ ರಸ್ತೆ, ಪಾರ್ಕ್ ರಸ್ತೆ, ಚಾಂದನಿ ಚೌಕ್, ಮಿಲ್ಲರ್ ಟ್ಯಾಂಕ್ ಬಂಡ್ ರಸ್ತೆ, ಜಸ್ಮಾಭವನ ರಸ್ತೆ, ಸುಲ್ತಾನ್‌ಜಿಗುಂಟ ರಸ್ತೆ, ಹೇನ್ಸ್ ರಸ್ತೆ, ಬಂಬೂಬಜಾರ್, ಧನಕೋಟಿ ಲೇನ್ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.ಎಂದು ತಿಳಿದು ಬಂದಿದೆ.
Poll (Public Option)

Post a comment
Log in to write reviews