2024-09-19 05:05:15

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಇಂದು ರಾಜಧಾನಿಯಲ್ಲಿ ವಿವಿಧೆಡೆ ವಿದ್ಯುತ್‌ ವ್ಯತ್ಯಯ

ಬೆಂಗಳೂರು: ಬೆಸ್ಕಾಂ ವತಿಯಿಂದ ನಗರದ ವಿವಿಧ ವಿದ್ಯುತ್‌ ಉಪಕೇಂದ್ರಗಳಲ್ಲಿ ತ್ರೈಮಾಸಿಕ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜುಲೈ 20ರಂದು ಉಪಕೇಂದ್ರಗಳ ವ್ಯಾಪ್ತಿಯಲ್ಲಿ ವಿದ್ಯುತ್‌ ಸರಬರಾಜಿನಲ್ಲಿ  ವ್ಯತ್ಯಯ ಉಂಟಾಗಲಿದೆ.

ವಿಜಿಐಎಸ್‌ಇಡಿಸಿ ಉಪಕೇಂದ್ರ ವ್ಯಾಪ್ತಿಯ ರೆಸಿಡಿನ್ಸಿ ರಸ್ತೆ, ಹುಂಡೈ ಆರ್‌.ಎಂ.ಯು, ಲ್ಯಾವೆಲ್ಲಿ ರಸ್ತೆ, ವಿಠ್ಠಲ್‌ ಮಲ್ಯ ರಸ್ತೆ, ಚರ್ಚ್‌ ಸ್ಟ್ರೀಟ್‌, ಕಸ್ತೂರ ಬಾ ರಸ್ತೆ, ಕ್ವೀನ್ಸ್‌ ರಸ್ತೆ, ರೆಸಿಡೆನ್ಸಿ ರಸ್ತೆ ಕ್ರಾಸ್‌, ಐಟಿಸಿ ಹೋಟೆಲ್‌ ಸುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ, ಬಾಗಮನೆ ಟೆಕ್‌ ಪಾರ್ಕ್‌ ಉಪಕೇಂದ್ರ ವ್ಯಾಪ್ತಿಯ ಟಿಟಿಕೆ ಪ್ರೆಸ್ಟೀಜ್‌ ಅಪಾರ್ಟ್‌ಮೆಂಟ್‌, ಬೈರಸಂದ್ರ, ಗುಂಡಪ್ಪ ಲೇಔಟ್‌, ಓಂ ಶಕ್ತಿ ದೇವಸ್ಥಾನ, ಕಗ್ಗದಾಸಪುರ 1ನೇ ಅಡ್ಡರಸ್ತೆ – 19ನೇ ಅಡ್ಡರಸ್ತೆ, ಭುವನೇಶ್ವರಿನಗರ ಸುತ್ತಲಿನ ಪ್ರದೇಶದಲ್ಲಿ ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ  ವಿದ್ಯುತ್‌ ವ್ಯತ್ಯಯವಾಗಲಿದೆ.

ಶೋಭಾ ಸಿಟಿ ಉಪಕೇಂದ್ರ ವ್ಯಾಪ್ತಿಯ ಚೊಕ್ಕನಹಳ್ಳಿ, ಡೋಮಿನೊ ಪಿಜ್ಜಾ, ಪಲೀಸ್‌ ಕ್ವಾರ್ಟ್‌ರ್ಸ್‌, ಆರ್‌.ಕೆ ಹೆಗ್ಡೆ ನಗರ, ಶಬರಿನಗರ, ಹೊಸಶಾಂತಿನಗರ, ಕೆಂಪೇಗೌಡ ಲೇಔಟ್‌, ನಾಗೇಹಳ್ಳಿ ಜಿಮ್‌, ಆರ್ಕಾವತಿ ಲೇಔಟ್‌, ಥಣಿಸಂದ್ರ, ಬೆಳ್ಳಹಳ್ಳಿ, ತಿರುಮೇನಹಳ್ಳಿ, ಮಿತ್ತಗಾನಹಳ್ಳಿ ಮತ್ತು ಕೋಗಿಲು, ವಿಧಾನಸೌಧ ಲೇಔಟ್‌, ಕರ್ನಾಟಕ ಕಲೇಜು ಸುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 11ರಿಂದ 4 ಗಂಟೆಯವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ.

Post a comment

No Reviews