ಬೆಂಗಳೂರು: ರಾಜ್ಯಾದ್ಯಂತ ಶುಕ್ರವಾರ ವಿಶ್ವ ರಕ್ತದಾನಿಗಳ ದಿನಾಚರಣೆ ಆಚರಿಸಲು ಆರೋಗ್ಯ ಇಲಾಖೆ ಕರೆ ನೀಡಿದೆ. ರಾಜ್ಯದ ಜಿಲ್ಲಾಸ್ಪತ್ರೆಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸುವ ಮೂಲಕ, ರಕ್ತದಾನದ ಅರಿವು ಮೂಡಿಸುವ ಯೋಜನೆ ಹಮ್ಮಿಕೊಂಡಿದೆ. ಪ್ರತಿಫಲಾಪೇಕ್ಷೆ ಇಲ್ಲದೇ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವ ದಾನಿಗಳನ್ನು ಸನ್ಮಾನಿಸುವ ಮುಖಾಂತರ ಅವರಿಗೆ ಗೌರವ ಸಲ್ಲಿಸಲಿದೆ.
ಇದು 20ನೇ ವರ್ಷದ ರಕ್ತಧಾನಿಗಳ ಸಂಭ್ರಮಾಚರಣೆಯಾಗಿದ್ದು "ಧನ್ಯವಾದ ರಕ್ತದಾನಿಗಳೆ" ಎನ್ನುವ ಘೋಷವಾಕ್ಯದೊಂದಿಗೆ ದಿನಾಚಣೆ ಆಯೋಜಿಸಲಾಗುತ್ತಿದೆ. 18ರಿಂದ 65 ವರ್ಷದೊಳಗಿನ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ, ಕನಿಷ್ಠ 45 ಕೆ.ಜಿ ದೇಹದ ತೂಕವಿರುವ ಮತ್ತು ರಕ್ತದಲ್ಲಿ ಹಿಮೊಗ್ಲೋಬಿನ್ ಪ್ರಮಾಣ ಕನಿಷ್ಠ 12.5 ಇರುವ ವ್ಯಕ್ತಿ ವರ್ಷಕ್ಕೆ ಪುರುಷರು -4 ಬಾರಿ, ಮಹಿಳೆಯರು 3 ಬಾರಿಯಾದರೂ ರಕ್ತದಾನ ಮಾಡುವ ಸಂಕಲ್ಪ ಮಾಡಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದೆ.
Post a comment
Log in to write reviews