
ತಿರುಪತಿ: ತಿಮ್ಮಪ್ಪನ ಲಡ್ಡುಗಳಿಗೆ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ ಪತ್ತೆಯಿಂದ ಆತಂಕಗೊಂಡಿರುವ ಬೆನ್ನಲ್ಲೇ ಭಕ್ತರೊಬ್ಬರ ಹೇಳಿಕೆ ಮತ್ತಷ್ಟು ಭಯ ಹುಟ್ಟುಹಾಕಿದೆ. ತಿರುಪತಿ ಲಡ್ಡುನಲ್ಲಿ ತಂಬಾಕು ತುಂಡುಗಳಿತ್ತು ಎಂದು ತೆಲಂಗಾಣದ ಖಮ್ಮಂ ಜಿಲ್ಲೆಯ ಭಕ್ತರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.
ಅವರು ಮನೆಗೆ ತಂದ ಪ್ರಸಾದದಲ್ಲಿ ಕಾಗದ ಸುತ್ತಿದ್ದ ತಂಬಾಕು ತುಂಡುಗಳಿದ್ದವು ಎಂದು ಹೇಳಿದ್ದಾರೆ. ಗೊಲ್ಲಗುಡೆಂ ಪಂಚಾಯತ್‌ನ ಕಾರ್ತಿಕೇಯ ಟೌನ್‌ಶಿಪ್‌ನ ನಿವಾಸಿ ದೋಂತು ಪದ್ಮಾವತಿ ಅವರು ಸೆಪ್ಟೆಂಬರ್ 19 ರಂದು ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿಂದ ಮನೆಗೆ ತಂದಿದ್ದ ಲಡ್ಡುವಿನಲ್ಲಿ ತಂಬಾಕು ಪತ್ತೆಯಾಗಿತ್ತು.
ಪದ್ಮಾವತಿಯು ಕುಟುಂಬ ಮತ್ತು ಅಕ್ಕಪಕ್ಕದ ಮನೆಯವರಿಗೆ ಕೊಡಲು ತಂದಿದ್ದ ಲಡ್ಡು ತೆರೆದಾಗ ಸಣ್ಣ ಪೇಪರ್‌ನಲ್ಲಿ ಸುತ್ತಿದ ತಂಬಾಕಿನ ತುಂಡುಗಳು ಕಂಡು ಬೆಚ್ಚಿಬಿದ್ದಿದ್ದರು. ಪ್ರಸಾದವು ಪವಿತ್ರವಾಗಿರಬೇಕು ಆದರೆ ಅಂತಹ ಪದಾರ್ಥಗಳು ಅದರಲ್ಲಿ ಕಂಡುಬಂದಿದ್ದು ಬೇಸರ ಉಂಟು ಮಾಡಿತ್ತು.
ಹಿಂದಿನ ಜಗನ್ ಮೋಹನ್ ರೆಡ್ಡಿ ಸರ್ಕಾರದ ಅವಧಿಯಲ್ಲಿ ತಿರುಪತಿ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡಲಾಗಿದ್ದ ಲಡ್ಡೂಗಳಲ್ಲಿ ಪ್ರಾಣಿಗಳ ಕೊಬ್ಬು ಸೇರಿದಂತೆ ಗುಣಮಟ್ಟವಿಲ್ಲದ ಪದಾರ್ಥಗಳು ಪತ್ತೆಯಾಗಿವೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕಳೆದ ವಾರ ಈ ಹೇಳಿಕೆ ನೀಡಿದ್ದರು.
ತಿರುಪತಿ ತಯಾರಿಕೆಯಲ್ಲಿ ಹಂದಿ, ದನದ ಕೊಬ್ಬು, ಮೀನಿನ ಎಣ್ಣೆ ಬಳಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಮತ್ತು ಇತರರ ವಿರುದ್ಧ ಹೈದರಾಬಾದ್‌ನಲ್ಲಿ ದೂರು ದಾಖಲಿಸಲಾಗಿದೆ.
ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಪಾವಿತ್ರ್ಯವನ್ನು ದುರುದ್ದೇಶಪೂರಿತ ಕೃತ್ಯಗಳ ಮೂಲಕ ಹಾಳು ಮಾಡಿದ ಮತ್ತು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಮೇಲೆ ಜಗನ್ ವಿರುದ್ಧ ವಕೀಲರೊಬ್ಬರು ದೂರು ನೀಡಿದ್ದಾರೆ.
Poll (Public Option)

Post a comment
Log in to write reviews