
ಈಗಾಗಲೇ ಚನ್ನಪಟ್ಟಣ ಉಪಚುನಾವಣೆ ರಂಗೇರಿದ್ದು, ಮೈತ್ರಿ ಪಕ್ಷದಲ್ಲಿ ಟಿಕೆಟ್ ಕಗ್ಗಂಟು ಆಗಿದೆ. ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗಿಳಿಸಲು ಜೆಡಿಎಸ್ ನಾಯಕರು ಸಿದ್ಧತೆ ಆರಂಭಿಸಿದ್ದಾರೆ. ಈ ಮಧ್ಯೆ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ಸಾಕಷ್ಟು ಒತ್ತಡ ಕೇಳಿಬಂದಿದೆ. ಈಗ ಮಾಜಿ ಸಚಿವ ಸಿಪಿ ಯೋಗೆಶ್ವರ್ಗೆ ಟಿಕೆಟ್ ಕೈ ತಪ್ಪುವ ಆತಂಕ ಹೆಚ್ಚಾಗಿದ್ದು, ಮೈತ್ರಿ ಟಿಕೆಟ್ ಗಿಟ್ಟಿಸಿಕೊಳ್ಳಲು ಹೈಕಮಾಂಡ್ ಮೊರೆ ಹೋಗಿದ್ದಾರೆ.
ಇಂದು ದೆಹಲಿಗೆ ತೆರಳಿರುವ ಮಾಜಿ ಸಚಿವ ಸಿಪಿ ಬಿಜೆಪಿ ಹೈಕಮಾಂಡ್ ನಾಯಕರ ಜೊತೆ ಟಿಕೆಟ್ ವಿಚಾರವಾಗಿ ಚರ್ಚೆ ನಡೆಸಲಿದ್ದಾರೆ. ಮೈತ್ರಿ ಟಿಕೆಟ್ ಕೈತಪ್ಪಿದರೆ ಮುಂದಿನ ನಡೆಯ ಬಗ್ಗೆಯೂ ಹೈಕಮಾಂಡ್ ನಾಯಕರಿಗೆ ಮನವರಿಕೆ ಮಾಡಿಕೊಡುವ ಸಾಧ್ಯತೆಯಿದೆ.ಎರಡ್ಮೂರು ದಿನಗಳಲ್ಲಿ ಬೆಂಬಲಿಗರು, ಆಪ್ತರ ಬೃಹತ್ ಸಮಾವೇಶ ನಡೆಸಲು ಸಿಪಿ ಯೋಗೆಶ್ವರ ತಯಾರಿ ನಡೆಸುತ್ತಿದ್ದು ಎಲ್ಲದಕ್ಕೂ ರೆಡಿ ಇರಿ ಎಂದು ಬೆಂಬಲಿಗರಿಗೆ ಸಂದೇಶ ರವಾನಿಸಿದ್ದಾರೆ.
Poll (Public Option)

Post a comment
Log in to write reviews