2024-09-19 04:34:20

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಮತ್ತೊಮ್ಮೆ ಮರುಬಿಡುಗಡೆಯಾಗಲಿದೆ 'ತುಂಬಾಡ್’ ಹಾರರ್ ಸಿನಿಮಾ  

ಕನ್ನಡ, ತೆಲುಗು, ಹಿಂದಿಗಳಲ್ಲಿ ರೀಲೀಸ್ ಟ್ರೆಂಡ್ ಶುರುವಾಗಿದೆ. ಕೆಲವು ಚಿತ್ರಗಳು ಮೂಲ ಬಿಡುಗಡೆಗಿಂತ ಮರು-ಬಿಡುಗಡೆಯಲ್ಲಿ ಹೆಚ್ಚು ಗಳಿಸುತ್ತಿವೆ. ‘ಶಾಸ್ತ್ರಿ’ ಸೇರಿ ಅನೇಕ ಸಿನಿಮಾಗಳು ಮರುಬಿಡುಗಡೆ ಆಗಿವೆ. ಈ ಸಾಲಿಗೆ ‘ತುಂಬಾಡ್’ ಕೂಡ ಸೇರಿದೆ. 
ಶ್ರದ್ಧಾ ಕಪೂರ್ ಮತ್ತು ರಾಜ್‌ಕುಮಾರ್ ರಾವ್ ನಟನೆಯ ‘ಸ್ತ್ರೀ 2′ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಕಂಡಿದೆ. ಈ ಚಿತ್ರ ಆಗಸ್ಟ್ 15 ರಂದು ಬಿಡುಗಡೆಯಾಯಿತು. ಈ ಹಾರರ್ ಕಾಮಿಡಿ ಚಿತ್ರವನ್ನು ಜನ ಮೆಚ್ಚಿಕೊಂಡಿದ್ದಾರೆ. ಭಾರತದಲ್ಲಿ ಗಳಿಕೆಯಲ್ಲಿ ಈ ಚಿತ್ರ 300 ಕೋಟಿ ಕ್ಲಬ್ ಸೇರಿದೆ. ವಿಶ್ವಾದ್ಯಂತ 400 ಕೋಟಿ ರೂ.ಗೂ ಹೆಚ್ಚು ಗಳಿಸಿದೆ. ಈ ಹಾರರ್ ಚಿತ್ರದ ಯಶಸ್ಸನ್ನು ನೋಡಿ ಮತ್ತೊಂದು ಹಾರರ್ ಸಿನಿಮಾ ಥಿಯೇಟರ್​ನಲ್ಲಿ ಮರು ಬಿಡುಗಡೆಯಾಗುತ್ತಿದೆ.
ಹಾರರ್ ಚಿತ್ರ ‘ತುಂಬಾಡ್’ ಮತ್ತೊಮ್ಮೆ ಥಿಯೇಟರ್‌ಗಳಿಗೆ ಬರಲಿದೆ. ಆಗಸ್ಟ್ 30ರಂದು ಈ ಸಿನಿಮಾ ಮರು-ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಮಿತೇಶ್ ಶಾ, ಆದೇಶ್ ಪ್ರಸಾದ್ ಮತ್ತು ಆನಂದ್ ಗಾಂಧಿ ಅವರೊಂದಿಗೆ ರಾಹಿ ಅನಿಲ್ ಬರ್ವೆ ಬರೆದಿದ್ದಾರೆ. ಈ ಸಿನಿಮಾ ಮೊದಲ ಬಾರಿಗೆ ರಿಲೀಸ್ ಆಗಿದ್ದು 2018ರ ಅಕ್ಟೋಬರ್ 12ರಂದು. ಈ ಚಿತ್ರದಲ್ಲಿ ಸೋಹಮ್ ಶಾ, ಹರೀಶ್ ಖನ್ನಾ, ಜ್ಯೋತಿ ಮಲ್ಶೆ, ರುದ್ರ ಸೋನಿ ಮತ್ತು ಮಾಧವ್ ಹರಿ ಜೋಶಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
‘ತುಂಬಾಡ್’ ಬಾಕ್ಸ್ ಆಫೀಸ್​ನಲ್ಲಿ 13.6 ಕೋಟಿ ಗಳಿಸಿತ್ತು. ಈ ಸಿನಿಮಾ 64 ನೇ ಫಿಲ್ಮ್‌ಫೇರ್ ಪ್ರಶಸ್ತಿಗಳಲ್ಲಿ 3 ಪ್ರಶಸ್ತಿಗಳನ್ನು ಗೆದ್ದಿತ್ತು. ಈ ಚಿತ್ರವನ್ನು ನಿರ್ಮಿಸಲು ನಿರ್ಮಾಪಕರು 6 ವರ್ಷಗಳನ್ನು ತೆಗೆದುಕೊಂಡಿದ್ದರು. ಈ ಚಿತ್ರದ ಶೂಟಿಂಗ್ 2012ರಲ್ಲಿ ಪ್ರಾರಂಭ ಆಗಿತ್ತು. ಸಿನಿಮಾ ರಿಲೀಸ್ ಆಗಿದ್ದು 2018ರಲ್ಲಿ. ‘ತುಂಬಾಡ್’ ಚಿತ್ರದ ಕಥೆ 1918ರಲ್ಲಿ ಮಹಾರಾಷ್ಟ್ರದ ತುಂಬಾಡ್ ಹಳ್ಳಿಯಿಂದ ಆರಂಭವಾಗುತ್ತದೆ. ವಿನಾಯಕ್ ರಾವ್ (ಸೋಹಮ್ ಶಾ) ತನ್ನ ತಾಯಿ ಮತ್ತು ಸಹೋದರನೊಂದಿಗೆ ಈ ಗ್ರಾಮದಲ್ಲಿ ವಾಸಿಸುತ್ತಾನೆ. ಗ್ರಾಮದ ದೇವಸ್ಥಾನದಲ್ಲಿ ನಿಧಿ ಅಡಗಿದೆ ಎನ್ನುವ ಸುದ್ದಿ ತಿಳಿದು ಅದರ ಹುಡುಕಾಟ ನಡೆಸುತ್ತಾನೆ. ಇಲ್ಲಿಂದ ಕಥೆ ಆರಂಭ ಆಗುತ್ತದೆ. ಹಾರರ್ ಅಂಶಗಳನ್ನು ಈ ಸಿನಿಮಾ ಹೊಂದಿದೆ.
ಕೆಲವು ಚಿತ್ರಗಳು ಮೂಲ ಬಿಡುಗಡೆಗಿಂತ ಮರು-ಬಿಡುಗಡೆಯಲ್ಲಿ ಹೆಚ್ಚು ಗಳಿಸುತ್ತಿವೆ. ಇತ್ತೀಚೆಗೆ ಬಿಡುಗಡೆಯಾದ ‘ಲೈಲಾ ಮಜ್ನು’ ಸಿನಿಮಾ ಮೊದಲ ಬಾರಿಗೆ (7 ಸೆಪ್ಟೆಂಬರ್ 2018) ಬಿಡುಗಡೆಯಾದಾಗ ಅದು ರೂ 3 ಕೋಟಿ ಗಳಿಸಿತ್ತು. ಆದರೆ ಎರಡನೇ ಬಾರಿ 6 ಕೋಟಿ ರೂ.ಗೂ ಹೆಚ್ಚು ಗಳಿಸಿದೆ. ಇದಲ್ಲದೆ, ರಾಕ್‌ಸ್ಟಾರ್ ಕೂಡ ಮೊದಲಿಗೆ ಅಭಿಮಾನಿಗಳಿಗೆ ಇಷ್ಟವಾಗಲಿಲ್ಲ, ಆದರೆ ಅದು ಮರು-ಬಿಡುಗಡೆಯಲ್ಲಿ ಚೆನ್ನಾಗಿ ಗಳಿಸಿತು.
 

Post a comment

No Reviews