2024-11-08 10:46:19

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ದೇಶದಲ್ಲಿ ಇಂದಿನಿಂದ ಮೂರು ಹೊಸ ಅಪರಾಧ ಕಾನೂನು - ಹೇಗಿರುತ್ತೆ ಹೊಸ ಅಪರಾಧ ಕಾಯ್ದೆ? 

ದೆಹಲಿ : ದೇಶದಲ್ಲಿ ಇಂದಿನಿಂದ ಮೂರು ಹೊಸ ಅಪರಾಧ ಕಾಯ್ದೆ ಜಾರಿಗೆ ಬರಲಿವೆ. ಬ್ರಿಟಿಷರ ಕಾಲದಿಂದ ಜಾರಿಯಲ್ಲಿದ್ದ ಐಪಿಸಿ, ಸಿಆರ್‌ಪಿಸಿ, ಇಂಡಿಯನ್ ಎವಿಡೆನ್ಸ್ ಆಕ್ಟ್‌ಗೆ ಗುಡ್‌ಬೈ ಹೇಳಲಾಗುತ್ತದೆ. ಕಾಲಮಿತಿಯೊಳಗೆ ತನಿಖೆ ಮತ್ತು ತ್ವರಿತ ನ್ಯಾಯ ಖಾತ್ರಿ ಪಡಿಸುವ ನಿಟ್ಟಿನಲ್ಲಿ ಈ ಪ್ರಮುಖ ಬದಲಾವಣೆ ಮಾಡಲಾಗಿದ್ದು, ಶಾಸನಗಳ ಮೂಲಕ ಡಿಜಿಟಲ್ ದಾಖಲೆಗಳನ್ನು ಪ್ರಾಥಮಿಕ ಪುರಾವೆಗಳಾಗಿಸುವಲ್ಲಿ ಪ್ರಮುಖ ಬದಲಾವಣೆ ತರಲಾಗಿದೆ.


ಹೇಗಿರುತ್ತೆ ಹೊಸ ಅಪರಾಧ ಕಾಯ್ದೆ?
– ಮೂರು ಭಾಗಗಳಾಗಿ ಭಾರತೀಯ ಅಧಿನಿಯ ವಿಂಗಡಣೆ
– ಒಟ್ಟು 11 ಅಧ್ಯಾಯಗಳಿರುವ ಅಧಿನಿಯಮ
– ಭಾರತೀಯ ದಂಡ ಸಂಹಿತೆ (IPC) ಬದಲಾವಣೆ
– ಅಪರಾಧ ಪ್ರಕ್ರಿಯಾ ಸಂಹಿತೆ (CRPC) ಬದಲಾವಣೆ
– ಸಾಕ್ಷ್ಯ ಕಾಯ್ದೆಗಳನ್ನು ರದ್ದು ಮಾಡಲಾಗಿದೆ
– IPC ಇನ್ನು ಮುಂದೆ ಭಾರತೀಯ ನ್ಯಾಯ ಸಂಹಿತೆ
– CRPC ಇನ್ನು ಮುಂದೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ
– ಭಾರತೀಯ ಸಾಕ್ಷ್ಯ ನಿಯಮ ಜಾರಿ ಮಾಡಲಾಗಿದೆ
-ಬ್ರಿಟಿಷರ ಕಾಲದಲ್ಲಿ ಶಿಕ್ಷೆಗೆ ಒತ್ತು ಈಗ ನ್ಯಾಯಕ್ಕೆ ಒತ್ತು
– ಶೂನ್ಯ FIR, ಆನ್ಲೈನ್ನಲ್ಲಿ ಪೊಲೀಸರಿಗೆ ದೂರು
– SMS ಮೂಲಕ ಸಮನ್ಸ್ ನೀಡುವ ಅವಕಾಶ
– ತನಿಖಾಧಿಕಾರಿ ಅಪರಾಧ ಸ್ಥಳದ ವಿಡಿಯೋ ಕಡ್ಡಾಯವಾಗಿ ಚಿತ್ರೀಕರಿಸಬೇಕು
– ವಿಚಾರಣೆ ಮುಗಿದ 45 ದಿನದಲ್ಲಿ ಕೋರ್ಟ್‌ಗಳು ತೀರ್ಪು ನೀಡಬೇಕು
– ಕೋರ್ಟ್‌ನಲ್ಲಿ ವಿಚಾರಣೆ ಆದ ದಿನದಿಂದ 60 ದಿನದಲ್ಲಿ ಚಾರ್ಜ್‌ಶೀಟ್‌ ಹಾಕಬೇಕು
– ರೇಪ್ ಕೇಸ್‌ನಲ್ಲಿ ಸಂಬಂಧಿಕರ ಸಮ್ಮುಖದಲ್ಲಿ ಸಂತ್ರಸ್ತೆ ಹೇಳಿಕೆ ದಾಖಲಿಸಬೇಕು
– ಪೊಲೀಸರು ಬಂಧಿಸಿದಾಗ ಬಂಧಿತ ತನಗಿಷ್ಟವಾದ ವ್ಯಕ್ತಿಗೆ ಮಾಹಿತಿ ನೀಡಬಹುದು
– ಗ್ಯಾಂಗ್ ರೇಪ್, ಮಾಸ್ ಮರ್ಡರ್, ಸರಗಳವು ಕೇಸ್ ದಾಖಲಿಸಲು ನಿರ್ದಿಷ್ಟ ಸೆಕ್ಷನ್
– ಈವರೆಗೆ ಇಂಥಾ ಕೃತ್ಯಗಳಲ್ಲಿ ನಿರ್ದಿಷ್ಟ ಸೆಕ್ಷನ್ ಇರಲಿಲ್ಲ

ಹಳೆ ಕಾನೂನು | ಹೊಸ ಕಾನೂನು :

ಭಾರತೀಯ ದಂಡ ಸಂಹಿತೆ (ಐಪಿಸಿ) – ಭಾರತೀಯ ನ್ಯಾಯ ಸಂಹಿತೆ(ಬಿಎನ್‌ಎಸ್‌)

ಕ್ರಿಮಿನಲ್‌ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) – ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 (ಬಿಎನ್‌ಎಸ್‌ಎಸ್‌)

ಭಾರತೀಯ ಸಾಕ್ಷ್ಯ ಕಾಯಿದೆ U – ಭಾರತೀಯ ಸಾಕ್ಷಿ ಅಧಿನಿಯಮ (ಬಿಎಸ್‌ಎ) 

Post a comment

No Reviews