ಬೆಳಗಾವಿ: ಸಾಮಾನ್ಯವಾಗಿ ಬಾರ್ ಅಂಡ್ ರೆಸ್ಟೋರೆಂಟ್ ಗಳು ಬೆಳಗ್ಗೆ 9 ರಿಂದ 10 ಗಂಟೆಗೆ ಬಾಗಿಲು ತೆರೆಯೋದು ಸಹಜ. ಆದರೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ್ ಖುರ್ದ್ ಪಟ್ಟಣದಲ್ಲಿರೋ ʻಸೋನಾ ರೆಸಿಡೆನ್ಸಿಯಲ್ʼ ಮದ್ಯದಂಗಡಿ ಮಾತ್ರ ಪ್ರತಿ ದಿನ ಸೂರ್ಯ ಮೂಡೋಕು ಮೊದಲೇ ಬಾಗಿಲು ತೆರೆದಿರುತ್ತೆ. ರಾತ್ರಿ 1 ಗಂಟೆ ಆದ್ರೂ ಬಾಗಿಲು ಮುಚ್ಚುವುದಿಲ್ಲ. ಪ್ರತಿ ದಿನ ರಾತ್ರಿಯಿಡೀ ಈ ಮದ್ಯದಂಗಡಿ ಸಮೀಪದಲ್ಲಿ ನಡೆಯುವ ಗಲಾಟೆ, ಕಿರುಚಾಟದಿಂದ ಸ್ಥಳೀಯರು ಬೇಸತ್ತು ಹೋಗಿದ್ದಾರೆ. ಈ ಬಗ್ಗೆ ಯಾರಿಗೆ ದೂರು ಕೊಟ್ಟರು ಅಧಿಕಾರಿಗಳು ಬಾರ್ ವಿರುದ್ಧ ಯಾವುದೇ ಕ್ರಮ ಜರುಗಿಸುತ್ತಿಲ್ಲ.
ಸೋನಾ ರೆಸಿಡೆನ್ಸಿಯಲ್ ಬಾರ್ ಅಬಕಾರಿ ಇಲಾಖೆಯ ಯಾವ ನಿಯಮಗಳನ್ನು ಯಾಕೆ ಅನುಸುತ್ತಿಲ್ಲ ಎಂದು ಸ್ಥಳೀಯರು ಪ್ರಶ್ನೆ ಮಾಡುದ್ರೆ, ʻರೀ ಅದೆಲ್ಲಾ ನಮಗೆ ಗೊತ್ತಿಲ್ಲ, ನೀವು ಓನರ್ ನ ಕೇಳ್ಕೊಳ್ಳಿʼ ಅಂತಾರೆ ಅಲ್ಲಿನ ಕೆಲಸಗಾರರು.
ಹಾಗಾದ್ರೆ ಓನರ್ ಯಾರಪ್ಪ ಅಂದ್ರೆ, ʻಸ್ಥಳೀಯ ಶಾಸಕ ರಾಜು ಗೌಡ ಕಾಗೆ ಸಹೋದರ ಸಿದ್ದಗೌಡ ಕಾಗೆಯವರಾಗಿದ್ದು, ಹಾಗಾಗಿಯೇ ಈ ಬಾರ್ ರಾಜ್ಯ ಅಬಕಾರಿಯ ಯಾವ ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬುದು ತಿಳಿದು ಬಂದಿದೆ.
ಸದ್ಯ ಜನ ಸಾಮಾನ್ಯರಿಗೆ ಒಂದು ನ್ಯಾಯ, ಜನ ನಾಯಕ ಮತ್ತವರ ಕುಟುಂಬಸ್ಥರಿಗೆ ಒಂದು ನ್ಯಾಯ ಎಂಬಂತಾಗಿದೆ ಈ ಕಾಗವಾಡ ತಾಲೂಕಿನ ಪರಿಸ್ಥಿತಿ..
Post a comment
Log in to write reviews