
ಚನ್ನಪಟ್ಟಣ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಮಗಳು ನಿಶಾ ಯೋಗೇಶ್ವರ್ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ಮೇಲೆ ಕೋರ್ಟ್ ನಿಂದ ಇಂಜೆಕ್ಷನ್ ಆರ್ಡರ್ ತಂದು ಮಾತಾಡದಂತೆ ಬಾಯಿ ಕಟ್ಟಾಕಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದೀಗ ಮಾಧ್ಯಮಗಳ್ಳಲ್ಲಿ ನನ್ನ ವಿಡಿಯೋ ಪ್ರಸಾರ ಮಾಡದಂತೆ ಆರ್ಡರ್ ತರಲಾಗಿದೆ. ಈ ಮೂಲಕ ನನ್ನನ್ನ ಸಂಪೂರ್ಣ ಸೈಡ್ ಲೈನ್ ಮಾಡೋಕೆ ವ್ಯವಸ್ಥಿತ ಷಡ್ಯಂತ್ರವಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇನ್ನೂ ಅಷ್ಟೇ ಅಲ್ಲದೆ, ನಾನು ನಮ್ಮ ತಂದೆ ಸಿಪಿ ಯೋಗೇಶ್ವರ್ ರನ್ನ ಅಪ್ಪ ಎಂದು ಕರೆಯುವುದರಲ್ಲಿ ತಪ್ಪೇನಿದೆ. ನನ್ನ ವಾಕ್ ಸ್ವಾತಂತ್ರ್ಯವನ್ನೇ ಕಿತ್ತುಕೊಳ್ಳಲಾಗಿದೆ . ದಿನಕ್ಕೊಂದು ಕೇಸುಗಳನ್ನ ಹಾಕಿ ತಮ್ಮ ಬಾಯಿ ಮುಚ್ಚಿಸಿದ್ದಾರೆ ಎಂದು ನಿಶಾ ಯೋಗೇಶ್ವರ್ ಸೋಷಿಯಲ್ ಮೀಡಿಯಾದಲ್ಲಿ ಅಳಲು ತೋಡಿಕೊಂಡಿದ್ದಾರೆ.
Poll (Public Option)

Post a comment
Log in to write reviews