
ಹಾಸನ: ದೇಶದಲ್ಲಿ ದರ್ಶನ್ ಸುದ್ದಿ ಒಂದೇ ಇರೋದಾ? ಬೆಳಿಗ್ಗೆ ಎದ್ದರೆ ಟಿವಿಯಲ್ಲಿ ಅದೇ ಬರ್ತಿದೆ. ಅವನೇನು ಸಮಾಜಕ್ಕೆ ರೋಲ್ ಮಾಡೆಲ್ಲ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಳ್ಳೆಯ ಕಲಾವಿದ ಜನರು ಇಷ್ಟ ಪಡ್ತಾರೆ ಅಂತ ಮಾಡಬಾರದ್ದನ್ನ ಮಾಡಿದ್ರೆ ಕಾನೂನು ಕ್ರಮ ತಗೊಳುತ್ತೆ ಎಂದು ದರ್ಶನ್ ವಿಚಾರಕ್ಕೆ ಗರಂ ಆಗಿದ್ದಾರೆ.
ಕೊಲೆ ಕೇಸ್ ನಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಸೇರಿದ್ದ ನಟ ದರ್ಶನ್ ಅವರು ಜೈಲಿನಲ್ಲಿ ರೌಡಿಗಳ ಜೊತೆ ಕಾಫಿ, ಸಿಗರೇಟು ಸೇದುತ್ತ ಕೂತಿದ್ದ ರಾಜಾತಿಥ್ಯದ ಫೋಟೋವೊಂದು ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಇದೀಗ ದರ್ಶನ್ ಅವರನ್ನು ಬಳ್ಳಾರಿಯ ಜೈಲಿಗೆ ಶಿಫ್ಟ್ ಮಾಡಿದ್ದಾರೆ. ರಾತ್ರೋರಾತ್ರಿ ದರ್ಶನ್ ಅವರನ್ನು ಸಾಗಿಸಿದ್ದಾರೆ. ಈ ಸುದ್ದಿ ಮಾಧ್ಯಮಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ಬಗ್ಗೆ ಮಾತನಾಡಿದ ಸಚಿವ ಕೆ.ಎನ್.ರಾಜಣ್ಣ ಅವರು ಗರಂ ಆಗಿದ್ದಾರೆ.
Poll (Public Option)

Post a comment
Log in to write reviews