
ಹೆಚ್.ಡಿ ಕೋಟೆ, ಸರಗೂರಿನಿಂದ ಕಾಡಂಚಿನ ಗ್ರಾಮಗಳಿಗೆ ಸಂಜೆ ವೇಳೆ ಜನರು ಬಸ್ ಇಲ್ಲದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ದೇಶದಲ್ಲಿ ನಮ್ಮ ಸಾರಿಗೆ ಇಲಾಖೆ ಉತ್ತಮ ಸ್ಥಾನದಲ್ಲಿದೆ. ಆದರೂ ರಾಜ್ಯದಲ್ಲಿ ಕೆಲವಡೆ ಸರಿಯಾದ ಬಸ್ ಸೌಲಭ್ಯವಿಲ್ಲದೆ ಜನರು ಇನ್ನೂ ಪರದಾಡುತ್ತಿದ್ದಾರೆ. ಸಾರಿಗೆ ಸಚಿವರೆ ನಿಮ್ಮ ಸಾಧನೆಗಳನ್ನ ಜಾಹಿರಾತು ಮಾಡುವದನ್ನ ಬಿಟ್ಟು, ನಿಮ್ಮ ಅಧಿಕಾರಿಗಳಿಗೆ ಇತ್ತ ಗಮನ ಹರಿಸಲು ಆದೇಶ ಮಾಡಿ.
ಹೆಚ್.ಡಿ ಕೋಟೆಯ ಕಾಡಂಚಿನ ಗ್ರಾಮವಾದದ ಜಾರಗೂರಿನ ಜನರು ಕೂಲಿಗಾಗಿ, ಆಸ್ಪತ್ರೆ, ಶಾಲೆ, ಉದ್ಯೋಗಕ್ಕಾಗಿ ಹಾಗೂ ಇನ್ನಿತರೆ ಕೆಲಸಗಳಿಗಾಗಿ ದೂರದ ಊರುಗಳಿಗೆ ತೆರಳಿರುತ್ತಾರೆ. ಕೆಲಸ ಮುಗಿಸಿ ಸಂಜೆ ವಾಪಸ್ ಮನೆ ತೆರಳಲು ಸರಿಯಾದ ಬಸ್ ಸೌಲಭ್ಯ ವಿಲ್ಲದೆ ಪರದಾಡುವ ಪರಿಸ್ತಿತಿ ಉಂಟಾಗುತ್ತಿದೆ. ಸಾರಿಗೆ ಇಲಾಖೆ ಇದುವರೆಗೂ ಸರಿಯಾದ ಇಲ್ಲಿನ ನಿವಾಸಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಿಲ್ಲ. ಇದರಿಂದಾಗಿ ಸಮಯಕ್ಕೆ ಸರಿಯಾಗಿ ಬಸ್ ಸಿಗದೆ ಪ್ರಯಾಣಿಕರು ಪರದಾಡುವಂತಾಗಿದೆ. ಸರಿಯಾದ ಬಸ್ ವ್ಯವಸ್ಥೆ ಇಲ್ಲದೆ ರಾತ್ರಿ ಎಲ್ಲಾ ಕಾದು ಬೇಸತ್ತ ಪ್ರಯಾಣಿಕರು. ಕೆಎಸ್‌ಆರ್‌ಟಿಸಿ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಹಿಡಿ ಶಾಪ ಹಾಕಿದ್ದಾರೆ.
Poll (Public Option)

Post a comment
Log in to write reviews