
ಬೆಂಗಳೂರು : ಷರತ್ತು ಬದ್ಧ ಜಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿರುವ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಜೈಲಿನ ಮುಂಭಾಗದಲ್ಲಿ ಸುದ್ದಿಗಾರೂಂದಿಗೆ ಮಾತನಾಡಿದರು.
ಈ ವೇಳೆ ಮತನಾಡಿದ ಸುರಜ್ ರೇವಣ್ಣ ನನ್ನ ಹಾಗೂ ನನ್ನ ಕುಟುಂಬದ ವಿರುದ್ಧ ಷಡ್ಯಂತ್ರ ನಡೆದಿದೆ. ಆದರೆ ಸತ್ಯವನ್ನು ಯಾವತ್ತೂ ಮುಚ್ಚಿಡಲು ಆಗಲ್ಲ, ತಮ್ಮ ವಿರುದ್ಧ ನಡೆದ ಕುತಂತ್ರವೆಲ್ಲ ಮುಂದೆ ಬಯಲಾಗಲಿದೆ ಎಂದು ಸೂರಜ್ ರೇವಣ್ಣ ಹೇಳಿದರು. ತಾನು ಯಾವುದಕ್ಕೂ ಹೆದರಿ ಓಡಿಹೋಗುವವನಲ್ಲ, ತನಿಖಾಧಿಕಾರಿಗಳೊಂದಿಗೆ ಸಹಕರಿಸಿದ್ದೇನೆ, ನಾಡಿನ ನ್ನಾಯಾಂಗದ ಮೇಲೆ ತನಗೆ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದ ಅವರು 2-3 ದಿನಗಳ ನಂತರ ಎಲ್ಲ ಘಟನಾವಳಿಯ ಸ್ಪಷ್ಟೀಕರಣ ನೀಡುತ್ತೇನೆ ಎಂದು ಹೇಳಿದರು.
ಜೈಲಿಂದ ಹೊರಬಂದ ಬಳಿಕ ಅವರು ನೇರವಾಗಿ ಬಸವನಗುಡಿಯಲ್ಲಿರುವ ತಮ್ಮ ತಂದೆ ಹೆಚ್ ಡಿ ರೇವಣ್ಣರ ಮನೆಗೆ ತೆರಳಿದರು.
Poll (Public Option)

Post a comment
Log in to write reviews