ತೂಕ ನಷ್ಟ ಮಾಡುವಗ 17 ಕೆಜಿ ತೂಕ ಹೊಂದಿದ ವಿಶ್ವದ ಅತಿ ದೊಡ್ಡ ಬೆಕ್ಕು ಸಾವನ್ನಪ್ಪಿದೆ.

17 ಕೆಜಿ ತೂಕವನ್ನು ಹೊಂದಿದ ವಿಶ್ವದ ಅತಿ ದೊಡ್ಡ ಬೆಕ್ಕು ಸಾವನ್ನಪ್ಪಿದೆ. ರಷ್ಯಾ ಮೂಲದ ಕ್ರಂಬ್ಸ್ ತೂಕ ನಷ್ಟ ಮಾಡುವ ಪ್ರಕ್ರಿಯೆಯಲ್ಲಿ ಕೊನೆಯುಸಿರೆಳೆದಿದೆ.
ಕ್ರಂಬ್ಸ್ ತನ್ನ ತೂಕದ ಮೂಲಕವೇ ವಿಶ್ವದಾದ್ಯಂತ ಗಮನ ಸೆಳೆದಿತ್ತು. ಇತ್ತೀಚೆಗೆ ತೂಕ ನಷ್ಟಗೊಳಿಸುವ ಹಾದಿಯನ್ನು ಹಿಡಿದಿತ್ತು. ಕ್ರೋಶಿಕ್ ಎಂದು ಕರೆಯಲ್ಪಡುತ್ತಿದ್ದ ಕ್ರಂಬ್ಸ್. ಸೂಪ್, ವಿಸ್ಕಿ, ಬಿಸ್ಕೆಟ್ಗಳನ್ನು ತಿನ್ನುತ್ತಿತ್ತು. ಅದಕ್ಕೆ ಬೇಕಾದ ಎಲ್ಲಾ ಕೆಲಸವನ್ನು ಕ್ರಂಬ್ಸ್ ಮಾಡುತ್ತಿತ್ತು.
ಕ್ರಂಬ್ಸ್ನಲ್ಲಿ ಮೇಲ್ನೋಟಕ್ಕೆ ಯಾವುದೇ ರೋಗ ಲಕ್ಷಣಗಳು ಕಾಣಿಸಿಕೊಂಡಿರಲಿಲ್ಲ. ಆದರೆ ಪಶುವೈದ್ಯರು ಹೇಳಿದಂತೆ, ಕ್ಯಾನ್ಸರ್ ಗೆಡ್ಡೆ ಮತ್ತು ದೇಹದಲ್ಲಿ ಕೊಬ್ಬು ಇದ್ದ ಕಾರಣ ಅಂಗ ವೈಫಲ್ಯಕ್ಕೆ ತುತ್ತಾಗಿ ಸಾವನ್ನಪ್ಪಿದೆ ಎಂದು ಹೇಳಿದ್ದಾರೆ.
ಬೆಕ್ಕಿನ ಆರೈಕೆದಾರರು ಕ್ರಂಬ್ ತೂಕ ನಷ್ಟಕ್ಕೆ ಏನೆಲ್ಲಾ ಅನುಸರಿಸುತ್ತಿದ್ದಾನೆ ಎಂಬ ಸಂಗತಿಯನ್ನು ಆನ್ಲೈನ್ನಲ್ಲೂ ಹಂಚಿಕೊಂಡಿದ್ದರು. ಆದರೀಗ ಕ್ರಂಬ್ಸ್ ಸಾವು ಮನೆ ಮಾಲೀಕರನ್ನು ಬೇಸರ ತರಿಸಿದೆ. ವಿಶ್ವದ ಗಮನ ಸೆಳೆದಿದ್ದ 17 ಕೆಜಿ ತೂಕದ ಬೆಕ್ಕು ಇನ್ನಿಲ್ಲ ಎಂಬುದು ಎಲ್ಲರ ನೋವಿಗೆ ಕಾರಣವಾಗಿದೆ.
Poll (Public Option)

Post a comment
Log in to write reviews