ಸಿನಿಮಾದಿಂದಾಗಿ ಮಹಾತ್ಮಾ ಗಾಂಧಿ ಯಾರೆಂದು ವಿಶ್ವಕ್ಕೆ ತಿಳಿಯಿತು: ಮೋದಿ ಹೇಳಿಕೆಗೆ ರಾಹುಲ್‌ಗಾಂಧಿ ಕಿಡಿ
1982 ರಲ್ಲಿ ಗಾಂಧಿ ಸಿನಿಮಾ ಬಿಡುಗಡೆಯಾಗುವವರೆಗೂ ಗಾಂಧಿ ಯಾರೆಂದು ವಿಶ್ವಕ್ಕೆ ತಿಳಿದಿರಲಿಲ್ಲ ಎಂಬ ಪ್ರಧಾನಿ ಮೋದಿ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ.
ಮೋದಿ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನ ಒಂದರಲ್ಲಿ ಈ ಮಾತನ್ನು ಹೇಳಿದ್ದಾರೆ. ಅವರ ಈ ಮಾತು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ವೈರಲ್ ಆಗುತ್ತಿದ್ದು, ಈ ಹೇಳಿಕೆಗೆ ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಮೋದಿ ಈ ಹಿಂದೆ ಒಂದು ವಾಹಿನಿಗೆ ಸಂದರ್ಶನವನ್ನು ನೀಡಿದ್ದರು. ಆ ಸಂದರ್ಶನದಲ್ಲಿ ಮೋದಿ ಕಾಂಗ್ರೆಸ್ ನವರು ಗಾಂಧಿಯನ್ನು ಹೆಚ್ಚು ಜನಪ್ರಿಯ ಗೊಳಿಸಲೇ ಇಲ್ಲ. 1982 ರಲ್ಲಿ ರಿಚರ್ಡ್ ಅಟ್ಟೆನ್ ಬರೊ ಅವರು ನಿರ್ದೇಶಿಸಿದ ಸಿನಿಮಾ ಬಿಡುಗಡೆಯಾದ ಮೇಲೆ ಗಾಂಧಿ ಯಾರೆಂದು ವಿಶ್ವಕ್ಕೆ ತಿಳಿಯಿತು. ಕಳೆದ 75 ವರ್ಷಗಳಲ್ಲಿ ಗಾಂಧಿಯನ್ನು ವಿಶ್ವಕ್ಕೆ ಪರಿಚಯಿಸುವ ಕೆಲಸ ನಮ್ಮದಾಗಿರಲಿಲ್ಲವೇ. ಗಾಂಧಿ ಸಿನಿಮಾ ಬಿಡುಗಡೆಯಾದ ಮೇಲೆಯೇ ಎಲ್ಲರಿಗೂ ಗಾಂಧಿ ಬಗ್ಗೆ ಕುತೂಹಲ ಹೆಚ್ಚಾಗಿದ್ದು, ಎಂದಿದ್ದರು. ಹಾಗೆಯೇ ಜಗತ್ತಿಗೆ ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾರಂಥಹ ಉತ್ತಮ ನಾಯಕರು ಗೊತ್ತಿದ್ದಾರೆ ಎಂದಾದರೆ ಗಾಂಧೀಜಿ ಕೂಡಾ ಅವರಿಗಿಂತ ಏನೂ ಕಡಿಮೆ ಇಲ್ಲ. ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಮ್ಮ ದೇಶವನ್ನು ಗಾಂಧೀಜಿ ಮತ್ತು ಅವರ ತತ್ವಗಳ ಮೂಲಕ ಗುರುತಿಸುವಂತೆ ಆಗಬೇಕು ಎಂದು ಮೋದಿ ಹೇಳಿದ್ದರು.
ಮೋದಿ ಹೇಳಿಕೆಗೆ ರಾಹುಲ್ ಗಾಂಧಿ ಕಿಡಿ.
ಪ್ರಧಾನಿ ನರೇಂದ್ರ ಮೋದಿಯ ಹೇಳಿಕೆಗೆ ರಾಹುಲ್ ಪರೋಕ್ಷವಾಗಿ ತಿರುಗೇಟು ನೀಡಿದ್ದು ಅದೇನೆಂದರೆ ಸಂಪೂರ್ಣ ರಾಜ್ಯಶಾಸ್ತ್ರ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಮಾತ್ರ ಚಲನಚಿತ್ರ ವೀಕ್ಷಿಸಿ ಮಹಾತ್ಮ ಗಾಂಧಿ ಅವರ ಬಗ್ಗೆ ಅರಿಯಬೇಕು ಎಂದು ಪರೋಕ್ಷವಾಗಿ ಮೋದಿ ಅವರ ಪದವಿಯನ್ನು ಉಲ್ಲೇಖಿಸಿ ಕುಟುಕಿದ್ದಾರೆ.
ಅಷ್ಟೇ ಅಲ್ಲದೆ ಚುನಾವಣಾ ಸಂದರ್ಭದಲ್ಲಿ ಮೋದಿ ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಅಕ್ಷೇಪ ವ್ಯಕ್ತವಾಗಿದೆ.
Post a comment
Log in to write reviews