
ಬೆಂಗಳೂರು: ವ್ಯಕ್ತಿಯೊಬ್ಬ ಮೆಟ್ರೋ ಹಳಿಗೆ ಹಾರಿ ಆತ್ಮ*ಹತ್ಯೆಗೆ ಯತ್ನಿಸಿರುವ ಘಟನೆ ನಮ್ಮ ಮೆಟ್ರೋದಲ್ಲಿ ಸಂಭವಿಸಿದೆ. ಎಷ್ಟೇ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡ್ರು ಅನಾಹುತಗಳು ತಪ್ಪಿಲ್ಲ.
ಪ್ರಾಥಮಿಕ ಮಾಹಿತಿಯ ಪ್ರಕಾರ ಮೆಟ್ರೋ ಹಳಿಗೆ ಹಾರಿದ ವ್ಯಕ್ತಿಗೆ ಯಾವುದೇ ಗಾಯಗಳು ಆಗಿಲ್ಲ. 30 ವರ್ಷ ವಯಸ್ಸಿನ ಬಿಹಾರ ಮೂಲದ ಶ್ರೀ ಸಿದ್ದಾರ್ಥ್ ಹಳಿಗೆ ಹಾರಿದ ವ್ಯಕ್ತಿ ಎಂದು ಗುರುತಿಸಲಾಗಿದೆ. ಕೂಡಲೇ ಎಚ್ಚೆತ್ತುಕೊಂಡ ಮೆಟ್ರೋ ಸಿಬ್ಬಂದಿ ಹಳಿಗೆ ಹಾರಿದ ವ್ಯಕ್ತಿಯನ್ನು ರಕ್ಷಣೆ ಮಾಡಿದ್ದಾರೆ.
ಜ್ಞಾನಭಾರತಿ ನಿಲ್ದಾಣದಲ್ಲಿ ಯುವಕನನ್ನು ವಶಕ್ಕೆ ಪಡೆದ ಜ್ಞಾನಭಾರತಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಜ್ಞಾನಭಾರತಿ ಮೆಟ್ರೋ ನಿಲ್ದಾಣದಲ್ಲಿ ಆತ್ಮ*ಹತ್ಯೆಗೆ ಯತ್ನಿಸಿದ ಸಿದ್ಧಾರ್ಥ್ ಬಿಕಾಂ ಪದವೀಧರ. SP ರಸ್ತೆಯ ಎಲೆಕ್ಟ್ರಾನಿಕ್ ಸರ್ವೀಸ್‌ನಲ್ಲಿ ಸೇಲ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಬ್ಯಾಂಕ್‌ನಿಂದ ಮೂರು ಲಕ್ಷ ರೂಪಾಯಿ ಸಾಲ ಮಾಡಿದ್ದ. ಈ ಬ್ಯಾಂಕ್ ಸಾಲದಿಂದ ಬೇಸತ್ತು ಆತ್ಮ*ಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.
Poll (Public Option)

Post a comment
Log in to write reviews