2024-09-19 04:32:38

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

​​​​​​​ಮಾರಮ್ಮ ದೇವಿ ಸಮ್ಮುಖದಲ್ಲಿ ʼಸಿಂಹರೂಪಿಣಿʼ ಟೀಸರ್‌ ಬಿಡುಗಡೆ

ಬೆಂಗಳೂರು: ಗುರು ಪೂರ್ಣಿಮೆ ದಿನದಂದು ʼಸಿಂಹರೂಪಿಣಿʼ ಚಿತ್ರದ ಪಾತ್ರಗಳ ಪರಿಚಯದ ಟೀಸರ್ ಬಿಡುಗಡೆ ಸಮಾರಂಭವು ಕಲಾವಿದರ ಭವನದಲ್ಲಿ ಅದ್ಧೂರಿಯಾಗಿ ನಡೆಯಿತು. ವೇದಿಕೆ ಮೇಲೆ ಸಾಕ್ಷಾತ್ ಮಾರಮ್ಮ ದೇವಿ ಪ್ರತಿಷ್ಠಾಪನೆ, ಮಾವಿನ ಮತ್ತು ಬೇವಿನ ಎಲೆಯಿಂದ ಸಿಂಗಾರ ಗೊಳಿಸಿದ್ದು ವಿಶೇಷವಾಗಿತ್ತು. ಕಿನ್ನಾಳ್‌ರಾಜ್ ಚಿತ್ರಕಥೆ-ಸಂಭಾಷಣೆ-ಸಾಹಿತ್ಯ ಹಾಗೂ ನಿರ್ದೇಶನ. ದೊಡ್ಡಬಳ್ಳಾಪುರ ಕೆ.ಎಂ.ನಂಜುಂಡೇಶ್ವರ ಕಥೆ ಬರೆದು ಶ್ರೀ ಚಕ್ರ ಫಿಲಿಂಸ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಆಕಾಶ್‌ಪರ್ವ ಸಂಗೀತ, ಕಿರಣ್‌ಕುಮಾರ್ ಛಾಯಾಗ್ರಹಣ, ವೆಂಕಿ.ಯುಡಿವಿ ಸಂಕಲನ, ಕಿಶೋರ್ ಕಲರಿಸ್ಟ್, ಸಾಹಸ ಥ್ರಿಲ್ಲರ್‌ಮಂಜು-ಚಂದ್ರು ಬಂಡೆ-ಮಂಜುನಾಗಪ್ಪ, ಸೌಂಡ್ ಎಫೆಕ್ಟ್ ನಂದು.ಜೆ ಇವರುಗಳ ಶ್ರಮದಿಂದ ಸಿದ್ದಗೊಂಡಿರುವ 1.45 ನಿಮಿಷದ ತುಣುಕುಗಳು ದೊಡ್ಡ ಪರದೆ ಮೇಲೆ ಅನಾವರಣಗೊಂಡಿತು.

ಪ್ಯಾನ್ ಇಂಡಿಯ ಸಂಗೀತ ಸಂಯೋಜಕ ರವಿಬಸ್ರೂರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡುತ್ತಾ ನಿರ್ದೇಶಕರು, ನಿರ್ಮಾಪಕರ ದೇವಿಯ ಮೇಲಿನ ಭಕ್ತಿ, ತಂತ್ರಜ್ಞರ ಕೆಲಸಗಳು ಚೆನ್ನಾಗಿ ಮೂಡಿಬಂದಿದೆ. ದೃಶ್ಯಗಳನ್ನು ನೋಡಿ ನನಗೆ ಆದಂತ ಕಂಪನ ಎಲ್ಲರಿಗೂ ಆಗಿದೆ ಅಂತ ಭಾವಿಸುತ್ತೇನೆ. ನನ್ನ ನಿರ್ದೇಶಕರ ಪಯಣ ಸುಮಾರು 15 ವರ್ಷದಷ್ಟು ಹಳೆಯದು. ಇವರ ನಿರ್ದೇಶನದಲ್ಲಿ ನಾನು ಸಂಗೀತ ಕಂಪೋಸ್ ಮಾಡಬೇಕೆಂದು ಆ ಸಮಯದಲ್ಲಿ ಮಾತಾಡಿಕೊಂಡಿದ್ದೇವು. ಅಲ್ಲಿಂದ ಒಂದಷ್ಟು ಸಿನಿಮಾಗಳಲ್ಲಿ ನಾವಿಬ್ಬರು ಸೇರಿದ್ದೇವು. ಉದ್ಯಮದ ಬೆಳವಣಿಗೆಗೆ ಇಂತಹ ಪ್ರತಿಭೆಗಳ ಪಾತ್ರ ತುಂಬ ಅಗತ್ಯವಿದೆ ಎಂದರು.

’ಕಾಟೇರ’ ಖ್ಯಾತಿಯ ಜಡೇಶ್‌ಕುಮಾರ್ ಪೋಸ್ಟರ್ ಬಿಡುಗಡೆ ಮಾಡಿದರು. ನಂತರ ಮಾತನಾಡುತ್ತಾ, ʻʻನಿರ್ದೇಶಕರು ನಮ್ಮ ಊರಿನ ಪಕ್ಕದವರು. ಪ್ರಾರಂಭದಿಂದಲೂ ಅವರ ಶ್ರಮವನ್ನು ನೋಡುತ್ತಾ ಬಂದಿದ್ದೇನೆ. ಚಿತ್ರದಲ್ಲಿ ನಮ್ಮ ಊರಿನ,ಭಾಗದ ಸಂಸ್ಕ್ರತಿಯನ್ನು ತೋರಿಸಲಾಗಿದೆ. ಅಂತಹ ಪ್ರಯತ್ನಗಳು ನಡೆದಾಗಲೇ ಮಾಹಿತಿಗಳು ಎಲ್ಲರಿಗೂ ತಿಳಿಯುತ್ತದೆ. ಮ್ಯೂಸಿಕ್ ಚೆನ್ನಾಗಿದೆ. ಕಾಟೇರ ಕೋಣ ಇಲ್ಲಿಗೆ ಯಾಕೆ ಬಂತು ಅಂತ ಕೇಳಿದೆ. ಸಿನಿಮಾ ನೋಡಿ ಅಂತಾರೆ. ನಿಮ್ಮಗಳ ಪ್ರಯತ್ನಕ್ಕೆ ಶುಭವಾಗಲಿʼʼ ಎಂದು ಹಾರೈಸಿದರು.

Post a comment

No Reviews