ಮದ್ಯಪ್ರದೇಶ: ಮಕ್ಕಳಿಗೆ ಪಾಠ ಮಾಡುವ ವೇಳೆ ತರಗತಿಯಲ್ಲಿ ಮೊಬೈಲ್‌ನಲ್ಲಿ ಕ್ಯಾಂಡಿಕ್ರಶ್ ಆಟವಾಡುತ್ತಿದ್ದ ಶಿಕ್ಷಕನನ್ನು ಅಮಾನತುಗೊಳಿಸಿರುವ ಘಟನೆ ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಕರ್ತವ್ಯದ ಸಮಯದಲ್ಲಿ ಮೊಬೈಲ್‌ನಲ್ಲಿ ಆಟವಾಡುತ್ತಾ ಇದ್ದಿದ್ದಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಂದ್ರ ಪನ್ಸಿಯಾ ಅವರು ಪರಿಶೀಲನೆಗಾಗಿ ಶಾಲೆಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಮಕ್ಕಳ ಪುಸ್ತಕ ತೆಗೆದು ನೋಡಿದಾಗ ಹೆಚ್ಚಿನ ತಪ್ಪುಗಳು ಎದ್ದು ಕಾಣಿಸಿದ್ದವು. ಈ ಕುರಿತು ಮಕ್ಕಳನ್ನು ವಿಚಾರಿಸಿದಾಗ ಕರ್ತವ್ಯ ಲೋಪ ಮಾಡಿರುವುದು ತಿಳಿದಿದೆ. ಅವರು ಪಾಠದ ಸಮಯದಲ್ಲಿ ಗಂಟೆಗಳ ಕಾಲ ಕ್ಯಾಂಡಿಕ್ರಷ್ ಆಡಿಕೊಂಡು ಸಮಯ ವ್ಯರ್ಥ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಶಾಲಾ ಸಮಯದಲ್ಲಿ ಮೊಬೈಲ್ ಫೋನ್‌ನ್ನು ಬಳಸುವುದು ಸೂಕ್ತವಲ್ಲ, ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಂದ್ರ ಪನ್ಸಿಯಾ ಅವರು ಆರು ವಿದ್ಯಾರ್ಥಿಗಳ ಹೋಂವರ್ಕ್ನಲ್ಲಿ ಆರು ಪುಟಗಳನ್ನು ಪರಿಶೀಲಿಸಿದರು ಮತ್ತು 95 ತಪ್ಪುಗಳನ್ನು ಗುರುತಿಸಿದರು.
ಒಂಬತ್ತು ತಪ್ಪು ಮೊದಲ ಪುಟದಲ್ಲಿಯೇ ಇತ್ತು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ರಾಜೇಂದ್ರ ಪನ್ಸಿಯಾ ಅವರು ಸಹಾಯಕ ಶಿಕ್ಷಕಿ ಪ್ರಿಯಾಂ ಗೋಯಲ್ ಅವರ ಫೋನ್ ಪರಿಶೀಲಿಸಿದರು. ಶಿಕ್ಷಕರು ಮೊಬೈಲ್ನಲ್ಲಿ ಕ್ಯಾಂಡಿಕ್ರಷ್ ಪ್ರತಿದಿನ ಒಂದೂವರೆ ಗಂಟೆಗಳಿಗಿಂತ ಹೆಚ್ಚು ಕಾಲ ಉಪಯೋಗಿಸುತ್ತಾರೆ ಎಂಬುದು ತಿಳಿದುಬಂದಿದೆ.
ಶಾಲೆಯ ಐದೂವರೆ ಗಂಟೆಗಳಲ್ಲಿ, ಪ್ರಿಯಮ್ ಗೋಯಲ್ ಕ್ಯಾಂಡಿ ಕ್ರಷ್‌ನಲ್ಲಿ ಸುಮಾರು ಎರಡು ಗಂಟೆಗಳ ಕಾಲ ಕಳೆಯುತ್ತಾರೆ. 26 ನಿಮಿಷಗಳ ಕಾಲ ಫೋನ್‌ನಲ್ಲಿ ಮಾತನಾಡುತ್ತಾರೆ ಮತ್ತು ಸುಮಾರು 30 ನಿಮಿಷಗಳ ಕಾಲ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳನ್ನು ಬಳಸುತ್ತಾರೆ ಎಂಬುದು ತಿಳಿದು ಬಂದಿದೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ ನಂತರ ರಾಜ್ಯ ಶಿಕ್ಷಣ ಇಲಾಖೆಗೆ ವಿಷಯದ ಬಗ್ಗೆ ತಿಳಿಸಿದ್ದು, ಸಹಾಯಕ ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ.
Post a comment
Log in to write reviews