ಇಬ್ಬರನ್ನು ಕೊಂದ ಉದ್ಯಮಿ ಪುತ್ರನಿಗೆ ರಾಜಾತಿಥ್ಯ..! ಕೋರ್ಟ್‌ನ ವಿಚಿತ್ರ ಆದೇಶದ ವಿರುದ್ಧ ಮೇಲ್ಮನವಿ.
ಪುಣೆ: ಮಹಾರಾಷ್ಟ್ರದ ಪುಣೆಯ ಕಲ್ಯಾಣಿನಗರ ಪ್ರದೇಶದಲ್ಲಿ, ಇಬ್ಬರಿಗೆ 3 ಕೋಟಿ ಮೌಲ್ಯದ ಪೋರ್ಷೆ ಕಾರು ಡಿಕ್ಕಿ ಹೊಡೆದು ಸಾವನ್ನಪ್ಪಿದ ಪ್ರಕರಣದಲ್ಲಿ, 15 ಗಂಟೆಗಳೊಳಗೆ ನ್ಯಾಯಾಲಯ ಆರೋಪಿಗೆ ಜಾಮೀನು ನೀಡಿತ್ತು. ಇದೀಗ ಪೊಲೀಸರು ಈ ಆದೇಶದ ವಿರುದ್ಧ ಜಿಲ್ಲಾ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.
ಕೃತ್ಯ ನಡೆದ ಬೆನ್ನಲ್ಲೇ ಆರೋಪಿಯನ್ನು ಬಂಧಿಸಲಾಗಿತ್ತು. ಆದರೆ ಆರೋಪಿ ಮಹಾರಾಷ್ಟ್ರದ ಪ್ರಭಾವಿ ಖ್ಯಾತ ಬಿಲ್ಡರ್ ಒಬ್ಬರ ಮಗ. ಕೋಟ್ಯಂತರ ವ್ಯವಹಾರ ನಡೆಸುವ ಉದ್ಯಮಿ ಆಗಿದ್ದರಿಂದ ನ್ಯಾಯಾಲಯವು ಅಂದೇ ವಿಚಿತ್ರ ಷರತ್ತು ವಿಧಿಸಿ ಜಾಮೀನು ನೀಡಿತ್ತು. ಆ ಷರತ್ತುಗಳೆಂದರೆ, ಅಪಘಾತದ ಕುರಿತಂತೆ 300 ಪದಗಳ ಪ್ರಬಂಧ ಬರೆಯುವುದು, 15 ದಿನಗಳ ಕಾಲ ಟ್ರಾಫಿಕ್ ಪೊಲೀಸರೊಂದಿಗೆ ಸಹಾಯ ಮಾಡುವುದು ಮತ್ತು ಆತನ ಕುಡಿತದ ಚಟ ಬಿಡಿಸಲು ಕೌನ್ಸೆಲಿಂಗ್ ಪಡೆಯುವುದು ಆಗಿತ್ತು. ನ್ಯಾಯಾಲಯದ ಈ ತೀರ್ಪು ವ್ಯಾಪಕ ಟ್ರೋಲ್, ಮತ್ತು ಆಕ್ರೋಶಕ್ಕೆ ಕಾರಣವಾಗಿತ್ತು. ಇನ್ನೂ ಅಚ್ಚರಿಯ ಸಂಗತಿ ಎಂದರೆ ಇಬ್ಬರನ್ನು ಕೊಂದ ಈ ಭೂಪನಿಗೆ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಬಿರಿಯಾನಿ ಕೊಟ್ಟು ಸತ್ಕರಿಸಲಾಗಿತ್ತಂತೆ.
ಸದ್ಯ ಬಂದಿರುವ ಮಾಹಿತಿ ಪ್ರಕಾರ, ಘಟನೆ ನಡೆದ ಬಳಿಕ ಬಂಧನ ಭೀತಿಯಿಂದ ಪರಾರಿಯಾಗಿದ್ದ ಆರೋಪಿಯ ತಂದೆ ಉದ್ಯಮಿ ವಿಶಾಲ್ ಅಗರ್ವಾಲ್‌ನನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. ಅಪ್ರಾಪ್ತ ಮಗನಿಗೆ ಕಾರ್ ನೀಡಿದ್ದಲ್ಲದೆ, ಹಿಟ್ ಆಂಡ್ ರನ್ ಕೇಸ್‌ನಲ್ಲಿ ಆರೋಪಿಯ ತಂದೆಯನ್ನು ಬಂಧಿಸಲಾಗಿದೆ. ಇನ್ನು ಈ ಅಪಘಾತ ನಡೆದ ವೇಳೆ ಆರೋಪಿಯು ಕಾರ್ ಅನ್ನು ಗಂಟೆಗೆ 200 ಕಿಲೋ ಮೀಟರ್ ವೇಗದಲ್ಲಿ ಚಲಾಯಿಸುತ್ತಿದ್ದ ಎನ್ನಲಾಗಿದೆ.
ಇದೀಗ ಈ ತೀರ್ಪಿನ ವಿರುದ್ಧ ಪೊಲೀಸರು ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಪುಣೆ ಸಿಪಿ ಅಮಿತೇಶ್ ಕುಮಾರ್ ಅವರು, ಈ ಆದೇಶದ ವಿರುದ್ಧ ಜಿಲ್ಲಾ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ. ಅಮಿತೇಶ್ ಕುಮಾರ್ ಅವರು ಮಾತನಾಡಿ, ಐಪಿಸಿ ಸೆಕ್ಷನ್ 304 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಅಪ್ರಾಪ್ತನಾಗಿರುವುದರಿಂದ ಅಪ್ರಾಪ್ತ ವಯಸ್ಕನೆಂದು ಪರಿಗಣಿಸಬೇಕು ಎಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ನ್ಯಾಯಾಲಯ ಅನುಮತಿಯನ್ನು ತಿರಸ್ಕರಿಸಿ ಆದೇಶದ ವಿರುದ್ಧ ನ್ಯಾಯಾಲಯದ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಪುಣೆ ರಸ್ತೆ ಅಪಘಾತದ ವಿಡಿಯೋ ಕುಡಾ ಹೊರಬಿದ್ದಿದೆ. ಇದರಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ವಿಶಾಲ್ ಅಗರ್ವಾಲ್ ಎಂಬುವರ ಅಪ್ರಾಪ್ತ ಪುತ್ರ ಕಾರು ಚಾಲನೆ ಮಾಡುವಾಗ ಇಬ್ಬರು ಇಂಜಿನಿಯರ್‌ಗಳನ್ನು ಹೇಗೆ ಕೊಂದಿದ್ದಾನೆ ಎಂಬುದು ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಕಾರು ಚಾಲಕನ ವಿರುದ್ಧ ಪೊಲೀಸರು ಯರವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
Post a comment
Log in to write reviews