
ಶಿವಮೊಗ್ಗ : ಅಮ್ಮನ ಶೀಲದ ಮೇಲೆ ಶಂಕೆ ವ್ಯಕ್ತಪಡಿಸಿ ಜಗಳ ಮಾಡುತ್ತಿದ್ದ ಅಪ್ಪನನ್ನು ಮಗನೇ ಹಲ್ಲೆ ಮಾಡಿ ಕೊಲೆಗೈದ ಘಟನೆ ಭದ್ರಾವತಿ ತಾಲೂಕಿನ ಅರೆಬೆಳಚಿ ಗ್ರಾಮದಲ್ಲಿ ನಡೆದಿದೆ.
ಮೃತ ವ್ಯಕ್ತಿ ಶುಕ್ರರಾಜ್ ಯಾನೆ(50) ಎನ್ನಲಾಗಿದೆ. ಶುಕ್ರರಾಜ್ ಯಾನೆ ಪತ್ನಿ ಶಿಲ್ಪಾ ಗ್ರಾಮ ಪಂಚಾಯಿತಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಶಿಲ್ಪಾ ಅವರ ದುಡಿಮೆಯಿಂದ ಮನೆ ನಡೆಯುತ್ತಿತ್ತು. ಆದರೆ, ಶುಕ್ರರಾಜ್ ಯಾನೆ ಹೆಂಡತಿ ಶಿಲ್ಪಾ ಶೀಲದ ಮೇಲೆ ಶಂಕಿಸಿ ಜಗಳ ಮಾಡುತ್ತಿದ್ದನು. ಅಲ್ಲದೆ ಗ್ರಾಮ ಪಂಚಾಯಿತಿ ಕೆಲಸಕ್ಕೆ ಹೋಗುವುದು ಬೇಡ ಬಿಟ್ಟುಬಿಡು ಎಂದು ಹೇಳುತ್ತಿದ್ದನು. ಆದರೆ ಕೆಲಸಕ್ಕೆ ಹೋಗದಿದ್ದರೆ ಮನೆ ನಿರ್ವಹಣೆಗೆ ಕಷ್ಟವಾಗುತ್ತದೆಂದು ಅರಿತು ಶಿಲ್ಪಾ ಪಂಚಾಯಿತಿ ಕೆಲಸಕ್ಕೆ ಹೋಗುತ್ತಿದ್ದರು.
ಇನ್ನು ಕೊಲೆಯಾದ ದಿನ ಶಿಲ್ಪಾ ಗ್ರಾಮ ಪಂಚಾಯಿತಿ ಕೆಲಸಕ್ಕೆ ಹೋಗಬಾರದೆಂದು ಪತಿ ಶುಕ್ರರಾಜ್ ಹೇಳಿದ್ದಾರೆ. ಆದರೆ, ಪತಿಯ ಮಾತನ್ನ ನಿರ್ಲಕ್ಷಿಸಿ ಕೆಲಸಕ್ಕೆ ಹೋಗುವುದಾಗಿ ಪತ್ನಿ ಹೇಳಿದ್ದಾಳೆ. ಶಿಲ್ಪಾಮಾತು ಕೇಳದ ಕಾರಣ ಇಬ್ಬರ ನಡುವೆ ಸಂಜೆ ವೇಳೆ ಜಗಳ ಶುರುವಾಗಿದೆ. ತಕ್ಷಣವೆ ಶಿಲ್ಪಾ ತನ್ನ ಮಗನಿಗೆ ಕರೆ ಮಾಡಿ ಅಪ್ಪ ಹಲ್ಲೆ ಮಾಡುತ್ತಿದ್ದಾನೆ ಎಂದು ತಿಳಿಸಿದ್ದಾರೆ. ಇದರಿಂದ ಕೋಪಗೊಂಡು ಮನೆಗೆ ಬಂದ ಮಗ ಅಪ್ಪನಿಗೆ ಬುದ್ಧಿ ಕಲಿಸಬೇಕೆಂದು ಚಾಕುವಿನಿಂದ ಇರಿದಿದ್ದಾನೆ. ತೀವ್ರ ರಕ್ತಸ್ರಾವದಲ್ಲಿ ಒದ್ದಾಡಿದ್ದ ಶುಕ್ರರಾಜ್ ಸ್ಥಳದಲ್ಲಿಯೆ ಸಾವನ್ನಪ್ಪಿದ್ದಾನೆ.
ಇನ್ನು ಆರೋಪಿ ಅಪ್ರಾಪ್ತನಾಗಿದ್ದು, ಹೋಳೆನರಸಿಂಹಪುರ ಪೋಲಿಸರು ಬಂಧಿಸಿದ್ದು, ಪ್ರಕರಣ ದಾಖಾಲಿಸಿಕೊಂಡಿದ್ದಾರೆ.
Poll (Public Option)

Post a comment
Log in to write reviews