ಕೊಪ್ಪಳ: ಮುಡಾ ಸೈಟ್ ಹಂಚಿಕೆ ಅವ್ಯವಹಾರ ಆರೋಪದ ಮೇಲೆ ಲೋಕಾಯುಕ್ತ ಸಂಸ್ಥೆ ಸಿದ್ದರಾಮಯ್ಯ ಅವರ ವಿರುದ್ಧ ಎಫ್ಐಆರ್ ದಾಖಲಿಸುತ್ತಿದ್ದಂತೆ ಇಡಿ ಅಲರ್ಟ್ ಆಗಿದೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಜೀವನಾಧಾರಿತ ಸಿನಿಮಾದ ಚಿತ್ರೀಕರಣ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ತಮಿಳು ನಟ ವಿಜಯ ಸೇತುಪತಿ ನಟನೆಯ ಲೀಡರ್ ರಾಮಯ್ಯ ಸಿನಿಮಾವನ್ನು ಬೆಂಗಳೂರು ಮೂಲದ ನಿರ್ದೇಶಕ ಸತ್ಯರತ್ನಂ, ಗಂಗಾವತಿ ಮೂಲದ ಹಯ್ಯಾತ್ ಫಿರ್ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಮೈಸೂರು ಭಾಗದಲ್ಲಿ ಸಿಎಂ ಬಾಲ್ಯ ಹಾಗೂ ಶಿಕ್ಷಣ ಸೇರಿ ಹಲವು ಸನ್ನಿವೇಶಗಳ ಶೂಟಿಂಗ್ ಪೂರ್ಣವಾಗಿತ್ತು. ಮೂಡಾ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆ ಎರಡನೆ ಭಾಗದ ಸನ್ನಿವೇಶಗಳ ಚಿತ್ರಿಕರಣಕ್ಕೆ ಚಿತ್ರ ತಂಡ ಬ್ರೇಕ್ ಹಾಕಿ ರಾಜಕೀಯ ಬೆಳವಣಿಗೆಗಳನ್ನು ಗಮನಿಸುತ್ತಿದೆ ಎಂದು ತಿಳಿದು ಬಂದಿದೆ.
Post a comment
Log in to write reviews