ಮಾವಿನ ಹಣ್ಣಿನಲ್ಲಿ ಅಡಗಿದೆ ಸೌಂದರ್ಯದ ಗುಟ್ಟು; ಒಂದು ವಾರ ಹೀಗೆ ಮಾಡಿ ಕೋಮಲ ತ್ವಚೆ ನಿಮ್ಮದಾಗುತ್ತೆ
ಮಾವಿನ ಹಣ್ಣನ್ನು ತ್ವಚೆಯ ಮೇಲೆ ಹಚ್ಚುವುದರಿಂದ ಶಾಖದಿಂದ ಉಪಶಮನ ದೊರೆಯುವುದಲ್ಲದೇ, ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ತ್ವರಿತ ಪರಿಹಾರ ದೊರೆಯುತ್ತದೆ. ಹಾಗಾದರೆ ತ್ವಚೆಯ ಆರೈಕೆಗೆ ಮಾವಿನ ಹಣ್ಣನ್ನು ಬಳಸುವುದು ಹೇಗೆ ಮತ್ತು ಅದರ ಅದ್ಭುತ ಪ್ರಯೋಜನಗಳೇನು ಎಂಬುವುದನ್ನು ನಾವಿಂದು ತಿಳಿಯೋಣ.
ಮಾವಿನ ಹಣ್ಣು ಅಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ. ಬೇಸಿಗೆ ಕಾಲ ಬಂತಂದರೆ ಸಾಕು ಎಲ್ಲರೂ ಮಾವಿನ ಹಣ್ಣಿನ ರುಚಿ ಸವಿಯಲು ಕಾತರದಿಂದ ಕಾಯುತ್ತಿರುತ್ತಾರೆ. ಅಲ್ಲದೇ ಅಡುಗೆ ರುಚಿ ಹೆಚ್ಚಿಸುವಲ್ಲಿ ಮಾವು ಪ್ರಮುಖ ಪಾತ್ರವಹಿಸುತ್ತದೆ. ಮಾವು ಕೇವಲ ಅಡುಗೆಗೆ ಮಾತ್ರವಲ್ಲದೇ ನಮ್ಮ ತ್ವಚೆಯ ಆರೈಕೆಗೂ ತುಂಬಾ ಪ್ರಯೋಜನಕಾರಿಯಾಗಿದೆ. ಮಾವು ವಿಟಮಿನ್ ಎ, ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್ಗಳನ್ನು ಹೊಂದಿರುತ್ತದೆ.
ಹಾಗಾದರೆ ತ್ವಚೆಯ ಆರೈಕೆಗೆ ಮಾವಿನ ಹಣ್ಣಿನ್ನು ಬಳಸುವುದು ಹೇಗೆ ಮತ್ತು ಅದರ ಅದ್ಭುತ ಪ್ರಯೋಜನಗಳೇನು ಎಂಬುವುದನ್ನು ನಾವಿಂದು ತಿಳಿಯೋಣ.
ಮ್ಯಾಂಗೊ ಮಾಸ್ಕ್: 1 ಹಸಿರು ಮಾವು, 3 ಚಮಚ ಓಟ್ಸ್ ಮತ್ತು 7-8 ಬಾದಾಮಿಗಳನ್ನು ರುಬ್ಬಿಕೊಳ್ಳಿ. ನಂತರ 2 ಚಮಚ ಹಸಿ ಹಾಲು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಈ ಪೇಸ್ಟ್ ಅನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಹಚ್ಚಿ, 15 ನಿಮಿಷಗಳ ನಂತರ ಶುದ್ಧ ನೀರಿನಿಂದ ತೊಳೆಯಿರಿ.ಈ ಫೇಸ್ ಪ್ಯಾಕ್ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಮತ್ತು ಚರ್ಮದ ಟೋನ್ ಸುಧಾರಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
Post a comment
Log in to write reviews