
ಬೆಳಗಾವಿ: ಶಾಲಾ ಆರಂಭದ ಮೊದಲ ದಿನವೇ ಎಸ್ಡಿಎಂಸಿ ಸದಸ್ಯರು ಶಾಲೆಗೆ ಬೀಗ ಹಾಕಿದ ಘಟನೆ ಕಾಗವಾಡ ತಾಲೂಕಿನ ತಂಗಡಿ ಗ್ರಾಮದಲ್ಲಿ ನಡೆದಿದೆ.
ಕಳೆದ ಒಂದು ವರ್ಷದಿಂದ ಮುಖ್ಯ ಶಿಕ್ಷಕ ಸರಿಯಾಗಿ ಶಾಲೆಗೆ ಬರದ ಕಾರಣ ಎಸ್ಡಿಎಂಸಿ ಸದಸ್ಯರು ಶಿಕ್ಷಕನನ್ನು ಬದಲಾವಣೆ ಮಾಡುವಂತೆ ಆಗ್ರಹಿಸಿದ್ದಾರೆ. ಜಿಲ್ಲಾ ಮುಖ್ಯಶಿಕ್ಷಣಾಧಿಕಾರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಕ್ರಮ ಕೈಗೊಳ್ಳದ ಕಾರಣ ಗ್ರಾಮದ ಪ್ರೌಢಶಾಲೆಗೆ ಬೀಗ ಹಾಕಲಾಗಿದೆ. ಮುಖ್ಯ ಶಿಕ್ಷಕ ಎಂ ಎಸ್ ಚೌಗಲೇ ಬದಲಿಸಿ ಬೇರೆ ಶಿಕ್ಷಕರನ್ನು ನಿಯೋಜಿಸಲು ಗ್ರಾಮಸ್ಥರು ಕೋರಿದ್ದಾರೆ. ಸ್ಪಂದಿಸದ ಅಧಿಕಾರಿಗಳ ವಿರುದ್ಧ ಶಾಲೆಯ ಮುಂದೆ ಧರಣಿ ಕುಳಿತ ಎಸ್ಡಿಎಂಸಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Poll (Public Option)

Post a comment
Log in to write reviews