
ಬೆಳಗಾವಿ: ಗಾಳಿ ಮಳೆಗೆ ಸರ್ಕಾರಿ ಶಾಲೆಯ ಮೇಲ್ಛಾವಣಿ ಹಾರಿ ಹೋಗಿದ್ದು, ವಿದ್ಯಾರ್ಥಿಗಳು ಪರದಾಡಿದ ಘಟನೆ ರಾಯಬಾಗದಲ್ಲಿ ನಡೆದಿದೆ.
ಗ್ರಾಮೀಣ ಪ್ರದೇಶದ ರಾಜಾರಾಮ ಕಾಲೋನಿಯ ಸರ್ಕಾರಿ ಶಾಲೆಯಲ್ಲಿ 100 ಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಗಾಳಿ ಮಳೆಗೆ ಈ ಶಾಲೆ ಮೇಲ್ಛಾವಣಿ ಹಾರಿ ಹೋಗಿರುವುರಿಂದ ಮಕ್ಕಳು ತರಬೇತಿ ಕೇಳಲು ಪರದಾಡುವ ಪರಿಸ್ಥಿತಿ ಉಂಟಾಗಿದೆ. ಇಷ್ಟೆಲ್ಲ ಆದರೂ ಸಹ ಸ್ಥಳಕ್ಕೆ ಆಗಮಿಸದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
Poll (Public Option)

Post a comment
Log in to write reviews