
ಕೊಪ್ಪಳ: ಜಿಲ್ಲೆಯ ಕಾರಟಗಿ ತಾಲೂಕಿನಿಂದ ಚಳ್ಳೂರು ಗ್ರಾಮಕ್ಕೆ ತೆರಳುವ ರಸ್ತೆ ಕೆಸರುಮಯವಾಗಿದ್ದು ಸಂಪೂರ್ಣ ರಸ್ತೆ ಗದ್ದೆಯಂತಾಗಿದೆ. ಹೀಗಾಗಿ ರಸ್ತೆಯಲ್ಲಿಯೇ ಭತ್ತ ನಾಟಿ ಮಾಡಿ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನಿಂದ ಚಳ್ಳೂರು ಗ್ರಾಮಕ್ಕೆ ತೆರಳುವ ರಸ್ತೆ ಸಂಪೂರ್ಣ ಹಾಳಾಗಿದ್ದು ಮಳೆ ಬಂದು ರಸ್ತೆ ಕೆಸರುಮಯವಾಗಿ ಸಂಪೂರ್ಣ ರಸ್ತೆ ಗದ್ದೆಯಂತಾಗಿದೆ. ಈಗಾಗಿ ಇಲ್ಲಿನ ಜನರು ಓಡಾಡುವುದಕ್ಕೂ ಕಷ್ಟ ಪಡುವಂತಾಗಿದೆ. ಹೀಗಾಗಿ ರಸ್ತೆಯಲ್ಲಿಯೇ ಭತ್ತ ನಾಟಿ ಮಾಡಿ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಕನಿಷ್ಟ ರಸ್ತೆ ಮಾಡಿಸದಿದ್ರೆ ಹೇಗೆ ಎಂದು ಕಿಡಿಕಾರಿದ್ದಾರೆ. ರಸ್ತೆ ಅಭಿವೃದ್ಧಿ ಮಾಡದಿದ್ರೆ, ಸಚಿವ ಶಿವರಾಜ್ ತಂಗಡಗಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.
Poll (Public Option)

Post a comment
Log in to write reviews