ಚಿಕ್ಕಣ್ಣ ಜೋತೆ ಮತ್ತೊಬ್ಬ ನಟನಿಂದಲೂ ಸಾಕ್ಷಿ ಹೇಳಿಕೆ ಪಡೆದಿರುವ ಪೊಲೀಸರು

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಈಗ ಬೇರೆಯದ್ದೇ ಮಜಲು ಪಡೆಯುತ್ತಿದೆ. ಐವಿಟ್ನೆಸ್ಗಳು ಯಾರು, ಪ್ರಬಲ ಸಾಕ್ಷಿಗಳು ಯಾರು ಎಂಬ ವಿಚಾರವೂ ಆಚೆ ಬರುತ್ತಿದೆ. ಸ್ಟೋನಿಬ್ರೂಕ್ನಲ್ಲಿ ದರ್ಶನ್ ಜೊತೆ ಊಟಕ್ಕೆ ಸೇರಿಕೊಂಡಿದ್ದ ಹಾಸ್ಯನಟ ಚಿಕ್ಕಣ್ಣನನ್ನು ಈಗಾಗಲೇ ವಿಚಾರಣೆ ಮಾಡಿರುವ ಪೊಲೀಸರು ಅವರಿಂದ ಹೇಳಿಕೆಯನ್ನು ಕೂಡ ಬರೆಸಿಕೊಂಡು ಅದನ್ನು ಚಾರ್ಜ್ಶೀಟ್ನಲ್ಲಿಯೂ ಕೂಡ ಉಲ್ಲೇಖಿಸಿದ್ದಾರೆ. ಸ್ಟೋನಿಬರ್ಗ್ನಲ್ಲಿ ದರ್ಶನ್ ಜೊತೆ ಕೇವಲ ಚಿಕ್ಕಣ್ಣ ಮಾತ್ರವಲ್ಲ ಮತ್ತೊಬ್ಬ ನಟನು ಇದ್ದರು, ಈಗ ಅವರನ್ನು ಕೂಡ ಸಾಕ್ಷಿಯಾಗಿ ಹೇಳಿಕೆ ಪಡೆದಿದ್ದಾರೆ ಪೊಲೀಸರು. ಆ ನಟನ ಹೆಸರು ಯಶಸ್ ಸೂರ್ಯ.
ಸ್ಟೋನಿ ಬ್ರೂಕ್ನಲ್ಲಿ ಪಾರ್ಟಿ ನಡೆದಿದ್ದ ವೇಳೆ ದರ್ಶನ್ ಗೆಳೆಯರ ಬಳಗ ಸೇರಿತ್ತು. ಕೆಲ ಹೊತ್ತಿನ ಬಳಿಕ ಚಿಕ್ಕಣ್ಣನು ಬಂದು ಸೇರಿದ್ರು. ಅಲ್ಲಿ ನಟ ಯಶಸ್ ಸೂರ್ಯ ಕೂಡ ಇದ್ರು. ಹೀಗಾಗಿ ಪೊಲೀಸರು ಅಂದು ಆ ಬಾರ್ನಲ್ಲಿ ಏನೇನೂ ನಡೀತು ಎಂಬುದರ ಕಂಪ್ಲೀಟ್ ಡಿಟೇಲ್ಸ್ನ್ನು ಪೊಲೀಸರು ಯಶಸ್ ಸೂರ್ಯನಿಂದ ಪಡೆದಿದ್ದಾರೆ.
ಪೊಲೀಸರ ಎದುರು ಹೇಳಿಕೆ ನೀಡಿರುವ ಯಶಸ್ ಸೂರ್ಯ, ಸ್ಟೋನಿಬ್ರೂಕ್ನಲ್ಲಿ ನಾನು, ಚಿಕ್ಕಣ್ಣ ದರ್ಶನ್ ಎಲ್ಲರೂ ಇದ್ದೆವು. ಅದೇ ವೇಳೆ ಪವನ್ ಬಂದು ದರ್ಶನ್ ಕಿವಿಯಲ್ಲಿ ಯಾವುದೋ ವಿಚಾರವನ್ನು ಹೇಳಿದ. ಬಳಿಕ ದರ್ಶನ್ಗೆ 2-3 ಕರೆಗಳು ಬಂದಿದ್ದವು. ಮೊಬೈಲ್ನಲ್ಲಿ ಮಾತನಾಡುವಾಗ ತುಂಬಾ ಗಂಭೀರವಾಗಿದ್ರು ದರ್ಶನ್. ನಂತರ ಅರ್ಜೆಂಟ್, ಟೆನ್ಶನ್ನಲ್ಲಿಯೇ ಹೊರಟು ಹೋದ್ರು ಎಂದು ಯಶಸ್ ಸೂರ್ಯ ಹೇಳಿಕೆ ನೀಡಿದ್ದಾರೆ.
ಇಷ್ಟು ಮಾತ್ರವಲ್ಲ, ದರ್ಶನ್ ಪರಿಚಯವಾದ ದಿನಗಳಿಂದ ಹಿಡಿದು ತಮಗೆ ತಿಳಿದಿರುವ ಅನೇಕ ವಿಷಗಳ ಬಗ್ಗೆ ಯಶಸ್ ಸೂರ್ಯ ಹೇಳಿಕೆ ನೀಡಿದ್ದಾರೆ. ಚಿಂಗಾರಿ ಸಿನಿಮಾ ಶೂಟಿಂಗ್ ವೇಳೆ ನನಗೆ ದರ್ಶನ್ ಪರಿಚಯ ಆದ್ರು. ಒಡೆಯ ಚಿತ್ರದ ಸಮಯದಲ್ಲಿ ನಟ ಚಿಕ್ಕಣ್ಣ ಪರಿಚಯವಾಗಿತ್ತು. ದರ್ಶನ್ ಕರೆದ ಸಮಯದಲ್ಲಿ ಸ್ಟೋನಿಬ್ರೂಕ್ನಲ್ಲಿ ಸೇರುತ್ತಿದ್ದೇವು. ದರ್ಶನ್ ಮತ್ತು ಪವಿತ್ರಗೌಡ ಲಿವಿಂಗ್ ಇನ್ ರಿಲೇಷನ್ ಬಗ್ಗೆ ಮಾಹಿತಿ ಇತ್ತು. ಸ್ಟೋನಿಬ್ರೂಕ್ನಲ್ಲಿ ಇದ್ದಾಗ ಅಂದು ದರ್ಶನ್ಗೆ ಪವಿತ್ರಾ ವಿಡಿಯೋ ಕಾಲ್ ಮಾಡಿದ್ರು. ಆಗ ಪವನ್ ಬಂದು ದರ್ಶನ್ ಕವಿಯಲ್ಲಿ ಯಾವುದೋ ವಿಚಾರವನ್ನು ಹೇಳಿದ್ರು. ಬಳಿಕ ದರ್ಶನ್ ನನಗೆ ಅರ್ಜೆಂಟ್ ಕೆಲಸ ಇದೆ ನೀವು ಹೊರಡಿ ಎಂದು ಹೇಳಿ ಹೊರಟರು. ನಾವು ಹೊರಗಡೆ ಬಂದಾಗ ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರ್ನಲ್ಲಿ ದರ್ಶನ್, ಪ್ರದೂಷ್, ವಿನಯ್ ಹಾಗೂ ವೈಟ್ ಕಾರ್ನಲ್ಲಿ ನಾಗರಾಜು ಹೊರಟರು. ನಾನು ಚಿಕ್ಕಣ್ಣ ಅಲ್ಲಿಂದ ಹೊರಟು, ನನಗೆ ಬೇರೆ ಕೆಲಸವಿದ್ದಿದ್ದರಿಂದ ಮನೆಗೆ ಹೊರಟೆ ಎಂದು ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ.
Poll (Public Option)

Post a comment
Log in to write reviews